ಮುಂಬೈ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಈಗ ವಿಶ್ವದ ಶ್ರೀಮಂತ ಕ್ರಿಕೆಟಿಗರಲ್ಲೊಬ್ಬರಾಗಿರಬಹುದು. ಆದರೆ ಅವರೂ ಮಧ್ಯಮ ವರ್ಗದ ಕುಟುಂಬದಿಂದ ಬಂದವರು.
ಅವರ ಬಡತನದ ಬಗ್ಗೆ ಗೆಳೆಯ, ಮಾಜಿ ಕ್ರಿಕೆಟಿಗ ಪ್ರಗ್ಯಾನ್ ಓಝಾ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ರೋಹಿತ್ ಅಂಡರ್ -15 ತಂಡದಲ್ಲಿದ್ದಾಗ ಕ್ರಿಕೆಟ್ ಕಿಟ್ ಖರೀದಿ ಮಾಡಲು ಹಣವವಿಲ್ಲದೇ ಪರದಾಡಿದ್ದರು.
ಆ ಸಂದರ್ಭದಲ್ಲಿ ಹಣ ಹೊಂದಿಸಲು ಅವರು ಹಾಲಿನ ಪಾಕೆಟ್ ಮಾರಾಟ ಮಾಡಿದ್ದರು. ಈಗ ರೋಹಿತ್ ರನ್ನು ನೋಡುವಾಗಲೆಲ್ಲಾ ನನಗೆ ಹೆಮ್ಮೆಯಾಗುತ್ತದೆ ಎಂದಿದ್ದಾರೆ.