ದುಬೈ: ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಅಫ್ಘಾನಿಸ್ತಾನ ವಿರುದ್ಧ ಗೆಲುವಿನ ಬಳಿಕ ನೂತನ ಕೋಚ್ ಆಗಿ ನೇಮಕಗೊಂಡಿರುವ ರಾಹುಲ್ ದ್ರಾವಿಡ್ ಬಗ್ಗೆ ಉಪನಾಯಕ ರೋಹಿತ್ ಶರ್ಮಾ ಖುಷಿ ಹಂಚಿಕೊಂಡಿದ್ದಾರೆ.
ದ್ರಾವಿಡ್ ಕೋಚ್ ಆಗಿ ಆಯ್ಕೆಯಾದ ಬಗ್ಗೆ ಏನು ಹೇಳಲು ಬಯಸುತ್ತೀರಿ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ರೋಹಿತ್ ಇದು ಅಧಿಕೃತವಾಯಿತೇ? ನಾವು ಪಂದ್ಯವಾಡುತ್ತಿದ್ದ ಕಾರಣ ನಮಗೆ ಇನ್ನೂ ಸೂಚನೆ ಬಂದಿಲ್ಲ. ಅವರು ಆಯ್ಕೆಯಾಗಿದ್ದು ನಮಗೆ ಸಂತೋಷದ ವಿಚಾರ. ದ್ರಾವಿಡ್ ಭಾರತೀಯ ಕ್ರಿಕೆಟ್ ನ ಧೀಮಂತ ಕ್ರಿಕೆಟಿಗ. ಅವರ ಜೊತೆ ಕೆಲಸ ಮಾಡುವದೇ ಖುಷಿ ಎಂದಿದ್ದಾರೆ.
ಭಾರತೀಯ ಕ್ರಿಕೆಟ್ ಗೆ ಮತ್ತೊಂದು ರೂಪದಲ್ಲಿ ಕಮ್ ಬ್ಯಾಕ್ ಮಾಡುತ್ತಿರುವುದಕ್ಕೆ ಅವರಿಗೆ ಸ್ವಾಗತ. ಅವರಿಗೆ ಅಭಿನಂದನೆಗಳು ಎಂದು ರೋಹಿತ್ ಹೇಳಿದ್ದಾರೆ.