ದುಬೈ: ಆಗಸ್ಟ್ 27 ರಿಂದ ಆರಂಭವಾಗಲಿರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ದುಬೈಗೆ ಬಂದಿಳಿದಿದ್ದಾರೆ.
ಕೊಹ್ಲಿ ಜೊತೆಗೆ ಪತ್ನಿ ಅನುಷ್ಕಾ ಕೂಡಾ ಜೊತೆಯಾಗಿದ್ದಾರೆ. ಉಳಿದ ಕ್ರಿಕೆಟಿಗರು ಬಳಿಕ ತಂಡವನ್ನು ಕೂಡಿಕೊಳ್ಳಲಿದ್ದಾರೆ.
ಈ ಬಾರಿ ಶ್ರೀಲಂಕಾ ಆತಿಥ್ಯದಲ್ಲಿ ಯುಎಇನಲ್ಲಿ ಏಷ್ಯಾ ಕಪ್ ಟೂರ್ನಿ ನಡೆಯಲಿದೆ. ಭಾರತಕ್ಕೆ ಮೊದಲ ಪಂದ್ಯ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧವಾಗಿದೆ. ಇದು ಭಾನುವಾರ ನಡೆಯಲಿದೆ.