Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪ್ರಮುಖರಿಲ್ಲದೆಯೂ ದೊಡ್ಡ ಗೆಲುವು ಕಂಡ ಕ್ಯಾಪ್ಟನ್ ರೋಹಿತ್ ಶರ್ಮಾಗೆ ಬಹುಪರಾಕ್

Rohit Sharma

Krishnaveni K

ರಾಜ್ ಕೋಟ್ , ಸೋಮವಾರ, 19 ಫೆಬ್ರವರಿ 2024 (08:15 IST)
Photo Courtesy: Twitter
ರಾಜ್ ಕೋಟ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯವನ್ನು 434 ರನ್ ಗಳ ಬೃಹತ್ ಅಂತರದಿಂದ ಗೆದ್ದ ಬಳಿಕ ನಾಯಕ ರೋಹಿತ್ ಶರ್ಮಾಗೆ ಅಭಿಮಾನಿಗಳಿಂದ ಬಹುಪರಾಕ್ ಸಿಕ್ಕಿದೆ.

ಈ ಸರಣಿಯಲ್ಲಿ ಒಬ್ಬರಲ್ಲಾ ಒಬ್ಬ ಪ್ರಮುಖ ಆಟಗಾರರು ಗಾಯದ ಕಾರಣದಿಂದ ತಂಡದಿಂದ ಹೊರಗುಳಿಯುತ್ತಿದ್ದಾರೆ. ಅದರಲ್ಲೂ ಬ್ಯಾಟಿಂಗ್ ವಿಭಾಗದಲ್ಲಂತೂ ಯುವ ಪಡೆಯನ್ನು ಕಟ್ಟಿಕೊಂಡು ರೋಹಿತ್ ಕಣಕ್ಕಿಳಿದಿದ್ದಾರೆ. ಹಾಗಿದ್ದರೂ ಕಳೆದ ಎರಡು ಪಂದ್ಯಗಳಲ್ಲಿ ಗೆದ್ದ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ರಂತಹ ಪ್ರಮುಖರ ಅನುಪಸ್ಥಿತಿಯಲ್ಲಿ ಯಶಸ್ವಿ ಜೈಸ್ವಾಲ್, ಸರ್ಫರಾಜ್ ಖಾನ್ ಮೊದಲಾದ ಅನನುಭವಿಗಳನ್ನು ಕಟ್ಟಿಕೊಂಡು ರೋಹಿತ್ ಭಾರತಕ್ಕೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ದೊಡ್ಡ ರನ್ ಅಂತರದ ಗೆಲುವು ಕೊಡಿಸಿದ್ದರು. ಅವರ ಈ ಸಾಧನೆ ನೋಡಿ ನೆಟ್ಟಿಗರು ರೋಹಿತ್ ಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಏಕದಿನದಲ್ಲೂ ಅತೀ ದೊಡ್ಡ ಅಂತರದ ಗೆಲುವು ರೋಹಿತ್ ನಾಯಕತ್ವದಲ್ಲಿ ಬಂದಿತ್ತು. ಈಗ ಟೆಸ್ಟ್ ಕ್ರಿಕೆಟ್ ನಲ್ಲೂ ಅವರದೇ ನಾಯಕತ್ವದಲ್ಲಿ ದೊಡ್ಡ ಅಂತರದ ಗೆಲುವು ಸಿಕ್ಕಿದೆ. ಹೀಗಾಗಿ ರೋಹಿತ್ ಮಾದರಿಯ ನಾಯಕ ಎಂದು ಕ್ರಿಕೆಟ್ ಅಭಿಮಾನಿಗಳು ಕೊಂಡಾಡಿದ್ದಾರೆ. ಬೇಝ್ ಬಾಲ್ ಆಟ ಆಡಲು ಹೋಗಿ ಇಂಗ್ಲೆಂಡ್ ತಕ್ಕ ಪಾಠ ಕಲಿತುಕೊಂಡಿದೆ. ಅತ್ತ ಯಾರು ಹೇಗೆ ಬೇಕಾದರೂ ಆಡಲಿ, ನಾವು ತಲೆಕೆಡಿಸಿಕೊಳ್ಳಲ್ಲ. ನಾವು ನಮ್ಮದೇ ಶೈಲಿಯ ಆಟ ಆಡುತ್ತೇವೆ ಎಂದಿದ್ದ ನಾಯಕ ರೋಹಿತ್ ಶರ್ಮಾ ಅದನ್ನು ಉಳಿಸಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

IND vs ENG test: ಶತಕ ಸಿಡಿಸಿದ ಬೆನ್ನಲ್ಲೇ ಮೈದಾನದಿಂದ ಹೊರ ನಡೆದ ಯಶಸ್ವಿ ಜೈಸ್ವಾಲ್