Webdunia - Bharat's app for daily news and videos

Install App

ಫಿಟ್ನೆಸ್ ಟೆಸ್ಟ್ ಗೆ ಹಾಜರಾಗಲು ರೋಹಿತ್ ಶರ್ಮಾ ತಡಮಾಡಿದ್ದೇಕೆ?!

Webdunia
ಗುರುವಾರ, 21 ಜೂನ್ 2018 (09:10 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರು ತಂಡಕ್ಕೆ ಆಯ್ಕೆಯಾಗಬೇಕಾದರೆ ಯೋ ಯೋ ಫಿಟ್ನೆಸ್ ಟೆಸ್ಟ್ ಗೆ ಹಾಜರಾಗಲೇಬೇಕು. ಆದರೆ ರೋಹಿತ್ ಶರ್ಮಾ ತಡವಾಗಿ ಹಾಜರಾದರು.

ಇದರಿಂದಾಗಿ ಇಂಗ್ಲೆಂಡ್ ಸರಣಿಗೆ ಆರಂಭಿಕ ರೋಹಿತ್ ಆಯ್ಕೆಯಾದರೂ, ತಂಡದೊಂದಿಗೆ ಕೂಡಿಕೊಳ್ಳುವುದು ಇನ್ನೂ ತೀರ್ಮಾನವಾಗಿರಲಿಲ್ಲ. ಅಸಲಿಗೆ ಜೂನ್ 17 ರಂದೇ ರೋಹಿತ್ ಫಿಟ್ನೆಸ್ ಟೆಸ್ಟ್ ಗೆ ಹಾಜರಾಗಬೇಕಿತ್ತು. ಆದರೆ ನಿನ್ನೆ ತಡವಾಗಿ ಫಿಟ್ನೆಸ್ ಟೆಸ್ಟ್ ಗೆ ಹಾಜರಾಗಿ ಗೆದ್ದೂ ಬಿಟ್ಟರು.

ಆದರೆ ರೋಹಿತ್ ಹೊರತಾಗಿ ಉಳಿದೆಲ್ಲಾ ಟೀಂ ಇಂಡಿಯಾ ಆಟಗಾರರು ಫಿಟ್ನೆಸ್ ಟೆಸ್ಟ್ ಗೆ  ಮೊದಲೇ ಹಾಜರಾಗಿದ್ದರು. ಆದರೆ ರೋಹಿತ್ ಇನ್ನೂ ಹಾಜರಾಗದೇ ಇರುವುದನ್ನು ನೋಡಿ ಅವರು ನಿಜವಾಗಿಯೂ ಫಿಟ್ ಆಗಿದ್ದಾರೆಯೇ ಇಲ್ಲವೇ ಎಂಬ ಅನುಮಾನ ಮೂಡಿಸಿತ್ತು. ಇತ್ತ ರೋಹಿತ್ ಫೇಲಾದರೆ ಅವರ ಸ್ಥಾನದಲ್ಲಿ ಇಂಗ್ಲೆಂಡ್ ಸರಣಿಗೆ ಆರಂಭಿಕರಾಗಿ ಕಣಕ್ಕಿಳಿಯಲು ಅಜಿಂಕ್ಯಾ ರೆಹಾನೆಯನ್ನು ಮೀಸಲು ಆಟಗಾರನಾಗಿ ನಿಗದಿಪಡಿಸಲಾಗಿತ್ತು.

ಈ ಬಗ್ಗೆ ಸ್ಪಷ್ಟನೆ ನೀಡಿದ ಬಿಸಿಸಿಐ ‘ಮೀಸಲು ಆಟಗಾರನನ್ನು ನಿಗದಿಪಡಿಸಿರುವುದರ ಹಿಂದೆ ವಿಶೇಷ ಉದ್ದೇಶವೇನೂ ಇಲ್ಲ.  ಸದ್ಯದ ಮಾಹಿತಿ ಪ್ರಕಾರ ರೋಹಿತ್ ಫಿಟ್ನೆಸ್ ನಲ್ಲಿ ಯಾವುದೇ ಕೊರತೆಯಿಲ್ಲ. ಅವರ ಕೆಲವು ಕಮಿಟ್ ನಿಂದಾಗಿ ಫಿಟ್ನೆಸ್ ಟೆಸ್ಟ್ ಗೆ ಹಾಜರಾಗಿರಲಿಲ್ಲ’ ಎಂದು ಹೇಳಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments