ಮುಂಬೈ: ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯಗಳಿಂದ ಧೋನಿಯನ್ನು ಕೈ ಬಿಡುವಾಗ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಗೆ ಅವಕಾಶ ನೀಡಲು ಈ ಕ್ರಮ ಕೈಗೊಂಡಿದ್ದಾಗಿ ಆಯ್ಕೆ ಸಮಿತಿ ಸಮರ್ಥನೆ ನೀಡಿತ್ತು.
ಆದರೆ ಧೋನಿಯನ್ನು ಕೈ ಬಿಡಲು ನೀಡಿದ್ದ ಈ ಕಾರಣವನ್ನೇ ಟೀಂ ಇಂಡಿಯಾ ಈಗ ಮರೆತಂತಿದೆ. ಯಾಕೆಂದರೆ ವಿಂಡೀಸ್ ವಿರುದ್ಧ ಟಿ20 ಪಂದ್ಯದಲ್ಲಿ ರಿಷಬ್ ಪಂತ್ ಗೆ ವಿಕೆಟ್ ಕೀಪಿಂಗ್ ಅವಕಾಶ ಸಿಕ್ಕಿಲ್ಲ. ಬದಲಾಗಿ ದಿನೇಶ್ ಕಾರ್ತಿಕ್ ಗೆ ಅವಕಾಶ ನೀಡಲಾಗಿತ್ತು.
ಹಾಗಿದ್ದರೆ ಆಡದೇ ರಿಷಬ್ ಗೆ ವಿಕೆಟ್ ಕೀಪಿಂಗ್ ಅನುಭವ ಸಿಗುವುದು ಹೇಗೆ? ಇದೇ ಪ್ರಶ್ನೆಯನ್ನು ಮಾಜಿ ನಾಯಕ ಸೌರವ್ ಗಂಗೂಲಿ ಕೂಡಾ ಕೇಳಿದ್ದಾರೆ. ವಿಂಡೀಸ್ ವಿರುದ್ಧ ರಿಷಬ್ ಪಂತ್ ಗೆ ವಿಕೆಟ್ ಕೀಪಿಂಗ್ ಅವಕಾಶ ನೀಡಿ, ದಿನೇಶ್ ಕಾರ್ತಿಕ್ ರನ್ನು ಕೇವಲ ಬ್ಯಾಟ್ಸ್ ಮನ್ ಆಗಿ ಬಳಸಬೇಕಿತ್ತು. ರಿಷಬ್ ಭಾರತದ ಭವಿಷ್ಯದ ಸ್ಟಾರ್ ಆಟಗಾರ. ಅವರು ಟೆಸ್ಟ್ ನಲ್ಲೂ ವಿಕೆಟ್ ಕೀಪಿಂಗ್ ಮಾಡುತ್ತಾರೆ .ಹೀಗಾಗಿ ಭವಿಷ್ಯದ ದೃಷ್ಟಿಯಿಂದ ಅವರಿಗೆ ಉತ್ತಮ ಅನುಭವ ಸಿಗುತ್ತಿತ್ತು ಎಂದು ಗಂಗೂಲಿ ಕಾರ್ಯಕ್ರಮವೊಂದರಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.