ಟೀಮ್ ಇಂಡಿಯಾ ಕೋಚಿಂಗ್ ಸಿಬ್ಬಂದಿ ನೇಮಕದ ವಿಚಾರವಾಗಿ ಸೃಷ್ಟಿಯಾಗಿದ್ದ ಹೈಡ್ರಾಮಾ ಅಂತ್ಯಗೊಂಡ ಬಳಿಕ ನಾಯಕ ವಿರಾಟ್ ಕೊಹ್ಲಿ ಮತ್ತು ರವಿಶಾಸ್ತ್ರಿಗೆ ಶ್ರೀಲಂಕಾ ಸರಣಿಯಿಂದ ಅಗ್ನಿ ಪರೀಕ್ಷೆ ಶುರುವಾಗಲಿದೆ. ಹಠವಿಡಿದು ರವಿಶಾಸ್ತರಿಯನ್ನ ಕರೆಸಿಕೊಂಡ ವಿರಾಟ್ ಕೊಹ್ಲಿ ಮತ್ತು ಭರತ್ ಅರೂನ್ ಅವರನ್ನ ಕರೆಸಿಕೊಂಡ ರವಿಶಾಸ್ತ್ರಿಗೆ ಈ ಸರಣಿ ಮಹತ್ವದ್ದಾಗಿದೆ.
ಸರಣಿಗೆ ತೆರಳುವುದಕ್ಕೂ ಮುನ್ನ ಸುದ್ದಿಗೋಷ್ಠಿ ನಡಡೆಸಿದ ರವಿಶಾಸ್ತ್ರೀ ಮತ್ತು ವಿರಾಟ್ ಕೊಹ್ಲಿ ಅತೀವ ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಕಳೆದ ಬಾರಿ ನಾವು ಶ್ರೀಲಂಕಾ ಸರಣಿ ಕೈಗೊಂಡು 24 ತಿಂಗಳು ಕಳೆದಿವೆ. ಆ ಸರಣಿ ಗೆದ್ದು ಯಾವುದೇ ಪಿಚ್`ನಲ್ಲೂ ಗೆಲ್ಲಬಹುದಾದ ಆತ್ಮವಿಶ್ವಾಸ ಬಂದಿದೆ. ಮೊದಲ ಪಂದ್ಯ ಸೋತರೂ ಬಳಿಕ ಕಮ್ ಬ್ಯಾಲಕ್ ಮಾಡಿ ಸರಣಿ ಗೆದ್ದಿದ್ದರ ಹಿಂದೆ ತಂಡದಲ್ಲಿ ನಾವು ಮೂಡಿಸಿದ್ದ ಉತ್ತಮ ಸಂಸ್ಕೃತಿ ಕಾರಣ, ಅದೇ ಮನಸ್ಥಿತಿಯಲ್ಲಿ ನಾವು ತೆರಳುತ್ತಿದ್ದೇವೆ ಎಂದು ವಿರಾಟ್ ಕೊಹ್ಲಿ ಎಂದಿದ್ದಾರೆ.
`ನನ್ನ ಕೈಯಲ್ಲಿ ಬ್ಯಾಟ್ ಮಾತ್ರವಿದೆ. ಮೈದಾನದಲ್ಲಿ ಹೋಗಿ ಪರಿಸ್ಥಿತಿಯನ್ನ ಹತೋಟಿಗೆ ತರುವುದು ನನ್ನ ಕೆಲಸ. ಕಳೆದ ಎರಡ್ಮೂರು ತಿಂಗಳಲ್ಲೂ ನಾನು ಅದನ್ನೇ ಮಾಡಿದ್ದೇನೆ. ನನ್ನ ಹತೋಟಿಯಲ್ಲಿಲ್ಲದ ವಿಚಾರಗಳ ಬಗ್ಗೆ ಕೆಲ ವಿವಾದಗಳು ಕೇಳಿಬಂದಿದ್ದವು. ನಮ್ಮ ಕೌಶಲ್ಯಕ್ಕೆ ತಕ್ಕಂತೆ ಅತ್ಯುತ್ತಮ ಪ್ರದರ್ಶನ ನೀಡುವುದಷ್ಟೇ ನನ್ನ ಕೆಲಸ ಎಂದರು.
ಶಾಸ್ತ್ರಿ, ಕುಂಬ್ಳೆಯಂತಹವರು ಬರುತ್ತಾರೆ, ಹೋಗುತ್ತಾರೆ. ಆದರೆ, ವಿಶ್ವದ ನಂಬರ್ ಒನ್ ಶ್ರೇಯಾಂಕ ಗಳಿಸಿರುವ ಖ್ಯಾತಿ ತಂಡಕ್ಕೆ ಸಲ್ಲಬೇಕು ಎಂದು ರವಿಶಾಸ್ತ್ರೀ ಹೇಳಿದ್ದಾರೆ. ಜೊತೆಗೆ, ತಂಡದ ಸದಸ್ಯರು ಯಾವುದೇ ಕಿರಿಕಿರಿ ಇಲ್ಲದೆ ಮೈದಾನಕ್ಕಿಳಿದರೆ ಮಾತ್ರ ಗೆಲುವು ಸಾಧ್ಯ ಎನ್ನುವ ಮೂಲಕ ಪರೋಕ್ಷವಾಗಿ ಅನಿಲ್ ಕುಂಬ್ಳೆಗೆ ಟಾಂಗ್ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ