ಬೆಂಗಳೂರು: ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಸೌರಾಷ್ಟ್ರ ಆರಂಭಿಕ ಆಘಾತ ಅನುಭವಿಸಿದರೂ ಇದೀಗ ಎಚ್ಚರಿಕೆಯಿಂದ ಇನಿಂಗ್ಸ್ ಕಟ್ಟಲು ಮುಂದಾಗಿದೆ.
ಕರ್ನಾಟಕ ಮೊದಲ ಇನಿಂಗ್ಸ್ ನಲ್ಲಿ 275 ರನ್ ಗಳಿಗೆ ಆಲೌಟ್ ಆಗಿತ್ತು. ಶ್ರೀನಿವಾಸ್ ಶರತ್ 83 ರನ್ ಗಳಿಸಿ ಕೊನೆಯವರೆಗೂ ನಾಟೌಟ್ ಆಗಿ ಉಳಿದರು. ಇದಕ್ಕೆ ಉತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿರುವ ಸೌರಾಷ್ಟ್ರ ಇತ್ತೀಚೆಗಿನ ವರದಿ ಬಂದಾಗ 2 ವಿಕೆಟ್ ನಷ್ಟಕ್ಕೆ 63 ರನ್ ಗಳಿಸಿದೆ. ಹಾರ್ವಿಕ್ ದೇಸಾಯಿ (16), ವಿಶ್ವರಾಜ್ ಜಡೇಜಾ (5) ಬೇಗನೇ ವಿಕೆಟ್ ಒಪ್ಪಿಸಿದ್ದು, ಇದೀಗ 40 ರನ್ ಗಳಿಸಿರುವ ಸ್ನೇಹ್ ಪಟೇಲ್ ಮತ್ತು ಇನ್ನೂ ಖಾತೆ ತೆರೆಯದ ಚೇತೇಶ್ವರ ಪೂಜಾರ ಕ್ರೀಸ್ ನಲ್ಲಿದ್ದಾರೆ.
ಕರ್ನಾಟಕ ಪರ ರೋಹಿತ್ ಮೋರೆಗೆ ಎರಡು ವಿಕೆಟ್ ಸಿಕ್ಕಿದೆ. ಕರ್ನಾಟಕದ ಮೊದಲ ಇನಿಂಗ್ಸ್ ಮೊತ್ತದಿಂದ ಸೌರಾಷ್ಟ್ರ ಇನ್ನೂ 212 ರನ್ ಗಳ ಹಿನ್ನಡೆಯಲ್ಲಿದ್ದು, ಪೂಜಾರ ಜತೆಗೆ ಪಟೇಲ್ ಉತ್ತಮ ಜತೆಯಾಟವಾಡಿದರೆ ಕರ್ನಾಟಕಕ್ಕೆ ಸಂಕಷ್ಟ ತಪ್ಪಿದ್ದಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ