ಕೋಲ್ಕತ್ತಾ: ರಣಜಿ ಟ್ರೋಫಿ ಪಂದ್ಯಾವಳಿಯ ಮೂರನೇ ಹಂತದ ಬಿ ಗುಂಪಿನ ಪಂದ್ಯದಲ್ಲಿ ಕರ್ದೆನಾಟಕದ ಮಾರಕ ದಾಳಿಗೆ ಕುಸಿದ ದೆಹಲಿ ಕೇವಲ 90 ರನ್ನುಗಳಿಗೆ ಆಲೌಟ್ ಆಗಿದೆ.
ಈಡನ್ ಗಾರ್ಡನ್ ಮೈದಾನದಲ್ಲಿ ಟಾಸ್ ಗೆದ್ದ ಕರ್ನಾಟಕ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ದೆಹಲಿ ಕರ್ನಾಟಕದ ಎಸ್. ಅರವಿಂದ್ (4 ವಿಕೆಟ್), ಹಾಗೂ ಕೆ. ಗೌತಮ್ (3 ವಿಕೆಟ್) ಮಾರಕ ದಾಳಿಗೆ 35.5 ಓವರ್ ಗಳಲ್ಲಿ ಕೇವಲ 90 ರನ್ ಗಳಿಸಲಷ್ಟೇ ಶಕ್ತವಾಯಿತು. ಅಭಿಮನ್ಯು ಮಿಥುನ್ ಎರಡು ವಿಕೆಟ್ ಕಿತ್ತರು.
ದೆಹಲಿ ಪರ ಗೌತಮ್ ಗಂಭೀರ್ ಕೇವಲ 2 ರನ್ನುಗಳಿಗೆ ಔಟಾದರೆ ರಿಷಬ್ ಪಂತ್ ಹಾಗೂ ದ್ರುವ್ ಶೋರೆ ತಲಾ 24 ರನ್ನು ಗಳಿಸಿದರು.
ಕರ್ನಾಟಕದ ಪರ ನಾಯಕ ವಿನಯ್ ಕುಮಾರ್ ಈ ಪಂದ್ಯದಲ್ಲಿ ಗಾಯದ ಸಮಸ್ಯೆಯಿಂದ ಆಡುತ್ತಿಲ್ಲ. ಅವರ ಸ್ಥಾನದಲ್ಲಿ ಕರುಣ್ ನಾಯರ್ ನಾಯಕತ್ವ ವಹಿಸಿಕೊಂಡಿದ್ದಾರೆ.
ವಿನಯ್ ಕುಮಾರ್ ನಾಯಕತ್ವದಲ್ಲಿ ಈಗಾಗಲೇ ಕರ್ನಾಟಕ ತನ್ನ ಮೊದಲ ಪಂದ್ಯವನ್ನು ಜಾರ್ಖಂಡ್ ವಿರುದ್ಧ ಡ್ರಾ ಮಾಡಿಕೊಂಡು ಮೂರು ಅಂಕ ಗಳಿಸಿಕೊಂಡಿತ್ತು. ದೆಹಲಿ ವಿರುದ್ಧ ಪಂದ್ಯ ಗೆಲ್ಲುವ ಉತ್ಸಾಹದಲ್ಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ