ಮುಂಬೈ: ಐಪಿಎಲ್ ಗಳಲ್ಲಿ ಫ್ರಾಂಚೈಸಿಗಳು ತಮ್ಮ ತಂಡದ ಕೋಚ್ ಗಳಾಗಿ ಹೆಚ್ಚಾಗಿ ವಿದೇಶಿಯರನ್ನೇ ನೇಮಿಸಿಕೊಳ್ಳುತ್ತಿರುವುದಕ್ಕೆ ಎನ್ ಸಿಎ ಅಧ್ಯಕ್ಷ ರಾಹುಲ್ ದ್ರಾವಿಡ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮ್ಮಲ್ಲಿ ಅನೇಕ ಪ್ರತಿಭಾವಂತ ಕೋಚ್ ಗಳಿದ್ದಾರೆ. ಹಾಗಿದ್ದರೂ ಐಪಿಎಲ್ ಗಳಲ್ಲಿ ಫ್ರಾಂಚೈಸಿಗಳು ವಿದೇಶೀ ಕೋಚ್ ಗಳನ್ನೇ ನೇಮಕ ಮಾಡಿ ನಮ್ಮವರ ಪ್ರತಿಭೆ ಬಳಸಿಕೊಳ್ಳುತ್ತಿಲ್ಲ ಎಂದು ದ್ರಾವಿಡ್ ಹೇಳಿದ್ದಾರೆ.
ನಮ್ಮ ದೇಶದ ಕೋಚ್ ಗಳಿಗೆ ಅವಕಾಶ ಕೊಟ್ಟು ಅವರಲ್ಲಿ ಆತ್ಮವಿಶ್ವಾಸ ತುಂಬಿ ಬೆಳೆಯಲು ಬಿಡಬೇಕು. ಆದರೆ ಐಪಿಎಲ್ ಗಳಲ್ಲಿ ನಮ್ಮ ದೇಶದವರಿಗೆ ಸಹಾಯಕ ಕೋಚ್ ಹುದ್ದೆಯೂ ಸಿಗದೇ ಇರುವುದಕ್ಕೆ ನನಗೆ ಬೇಸರವಿದೆ. ನಮ್ಮ ದೇಶದ ಮೈದಾನಗಳ ಪರಿಸ್ಥಿತಿ, ಆಟಗಾರರ ಮನಸ್ಥಿತಿ ನಮ್ಮ ದೇಶದ ಕೋಚ್ ಗಳಿಗೇ ಹೆಚ್ಚು ತಿಳುವಳಿಕೆ ಇರುತ್ತದೆ. ಆದರೆ ಫ್ರಾಂಚೈಸಿಗಳು ಅವರನ್ನು ಬಳಸಿಕೊಳ್ಳುತ್ತಿಲ್ಲ ಎಂದು ದ್ರಾವಿಡ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.