ಸೆಂಚೂರಿಯನ್: ರಾಹುಲ್ ದ್ರಾವಿಡ್ ರನ್ನು ಕೋಚ್ ಆಗಿ ಕ್ರಿಕೆಟಿಗರು ಯಾಕೆ ಮೆಚ್ಚಿಕೊಳ್ಳುತ್ತಾರೆ ಎಂಬುದಕ್ಕೆ ಆಫ್ರಿಕಾ ಟೆಸ್ಟ್ ನ ಮೊದಲ ದಿನದ ಘಟನೆಯೊಂದು ಸಾಕ್ಷಿಯಾಗಿದೆ.
ಸತತ ವೈಫಲ್ಯಕ್ಕೊಳಗಾಗಿರುವ ಚೇತೇಶ್ವರ ಪೂಜಾರ ಈ ಪಂದ್ಯದಲ್ಲೂ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ಡ್ರೆಸ್ಸಿಂಗ್ ರೂಂನಲ್ಲಿ ಜಸ್ಪ್ರೀತ್ ಬುಮ್ರಾ ಜೊತೆಗೆ ಪೆಚ್ಚಾಗಿ ನಿಂತಿದ್ದ ಪೂಜಾರ ಕಡೆಗೆ ಬಂದ ಕೋಚ್ ರಾಹುಲ್ ದ್ರಾವಿಡ್ ಮಾಡಿದ ಕೆಲಸಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.
ಸೀದಾ ಪೂಜಾರ ಬಳಿ ಹೋಗಿ ಅವರ ಬೆನ್ನು ತಟ್ಟಿ ದ್ರಾವಿಡ್ ಮುನ್ನಡೆದಿದ್ದಾರೆ. ಅವರು ಬೆನ್ನುತಟ್ಟಿದ ರೀತಿಗೆ ಪೂಜಾರ ಕೂಡಾ ನಕ್ಕು ಸಮಾಧಾನ ಮಾಡಿಕೊಂಡಿದ್ದಾರೆ. ಕೋಚ್ ಆಗಿ ವೈಫಲ್ಯಕ್ಕೊಳಗಾದ ಆಟಗಾರನ ಮನೋಸ್ಥೈರ್ಯ ಹೆಚ್ಚಿಸಲು ಇಂತಹದ್ದೊಂದು ಘಟನೆ ಸಾಕು ಎಂದು ನೆಟ್ಟಿಗರು ಶ್ಲಾಘಿಸಿದ್ದಾರೆ.