ಮುಂಬೈ: ಸ್ವಹಿತಾಸಕ್ತಿ ಹುದ್ದೆಗೆ ಸಂಬಂಧಿಸಿದಂತೆ ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸದಸ್ಯ ಸಂಜೀವ್ ಗುಪ್ತಾ ನೀಡಿದ ದೂರಿನನ್ವಯ ಇಂದು ಕ್ರಿಕೆಟ್ ದಿಗ್ಗಜ, ಎನ್ ಸಿಎ ಅಧ್ಯಕ್ಷ ರಾಹುಲ್ ದ್ರಾವಿಡ್ ವಿಚಾರಣೆಯನ್ನು ಇಂದು ಬಿಸಿಸಿಐ ನಡೆಸಲಿದೆ.
ಬಿಸಿಸಿಐ ಸ್ವತಂತ್ರ ತನಿಖಾಧಿಕಾರಿ ಡಿಕೆ ಜೈನ್ ಇಂದು ದ್ರಾವಿಡ್ ಮತ್ತು ಬಿಸಿಸಿಐ ಅಧಿಕಾರಿ ಮಯಾಂಕ್ ಪರೀಖ್ ವಿರುದ್ಧ ದಾಖಲಾಗಿರುವ ಸ್ವಹಿತಾಸಕ್ತಿ ಹುದ್ದೆ ಅರ್ಜಿಯ ವಿಚಾರಣೆ ನಡೆಸಲಿದ್ದಾರೆ.
ರಾಹುಲ್ ದ್ರಾವಿಡ್ ಬಿಸಿಸಿಐನಲ್ಲಿ ಹುದ್ದೆ ಹೊಂದಿರುವಾಗಲೇ ಇಂಡಿಯಾ ಸಿಮೆಂಟ್ಸ್ ಸಂಸ್ಥೆಯಲ್ಲೂ ಹುದ್ದೆ ಹೊಂದಿದ್ದಾರೆ. ಸುಪ್ರೀಂಕೋರ್ಟ್ ನಿರ್ದೇಶನದ ಪ್ರಕಾರ ಈ ರೀತಿ ಬಿಸಿಸಿಐಗೆ ಸಂಬಂಧಿಸಿದಂತೆ ಹುದ್ದೆಯಲ್ಲಿರುವವರು ಖಾಸಗಿ ಸಂಸ್ಥೆಗಳಲ್ಲಿ ಹುದ್ದೆ ಹೊಂದಿರಬಾರದು. ಹೀಗಾಗಿ ಇದು ಸ್ವಹಿತಾಸಕ್ತಿಗೆ ಸಂಬಂಧಿಸಿದ ಪ್ರಕರಣವಾಗುತ್ತದೆ ಎಂಬುದು ದೂರುದಾರರ ವಾದ.