ಮುಂಬೈ: ಸ್ವಹಿತಾಸಕ್ತಿ ಹುದ್ದೆ ಸಂಘರ್ಷದಲ್ಲಿ ಸಿಲುಕಿರುವ ಮಾಜಿ ಕ್ರಿಕೆಟಿಗ, ಎನ್ ಸಿಎ ಅಧ್ಯಕ್ಷ ರಾಹುಲ್ ದ್ರಾವಿಡ್ ಕುರಿತು ವಿಚಾರಣೆ ನಡೆಸಿರುವ ಬಿಸಿಸಿಐ ತನಿಖಾಧಿಕಾರಿ ಡಿಕೆ ಜೈನ್ ಸದ್ಯದಲ್ಲೇ ಈ ಕುರಿತು ತಮ್ಮ ತೀರ್ಪು ನೀಡುವುದಾಗಿ ಹೇಳಿದ್ದಾರೆ.
ರಾಹುಲ್ ದ್ರಾವಿಡ್ ವಿರುದ್ಧ ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ನ ಸದಸ್ಯರೊಬ್ಬರು ಸ್ವಹಿತಾಸಕ್ತಿ ಹುದ್ದೆ ಹೊಂದಿರುವ ದೂರು ಸಲ್ಲಿಸಿದ್ದರು. ಎನ್ ಸಿಎ ಹುದ್ದೆ ಜತೆಗೆ ದ್ರಾವಿಡ್ ಇಂಡಿಯಾ ಸಿಮೆಂಟ್ಸ್ ಕಂಪನಿಯಲ್ಲಿ ಹುದ್ದೆ ಹೊಂದಿದ್ದಾರೆಂಬುದು ಅವರ ಮೇಲಿನ ಆರೋಪ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಸಿಸಿಐ ನೀಡಿದ ನೋಟಿಸ್ ಗೆ ದ್ರಾವಿಡ್ ಉತ್ತರ ನೀಡಿದ್ದರು. ಈಗ ಆ ಬಗ್ಗೆ ಡಿಕೆ ಜೈನ್ ತನಿಖೆಯನ್ನೂ ನಡೆಸಿದ್ದಾರೆ. ಹೀಗಾಗಿ ಈ ಪ್ರಕರಣದ ಕುರಿತು ತಮ್ಮ ಅಂತಿಮ ತೀರ್ಪನ್ನು ಸದ್ಯದಲ್ಲೇ ನೀಡುವುದಾಗಿ ಅವರು ಸ್ಪಷ್ಟನೆ ನೀಡಿದ್ದಾರೆ.