ದುಬೈ: ಮುಂಬರುವ ವಿಶ್ವಕಪ್ ನಲ್ಲಿ ಉಗ್ರವಾದವನ್ನು ಬೆಂಬಲಿಸುವ ಪಾಕಿಸ್ತಾನ ಜತೆ ಐಸಿಸಿಯ ಯಾವುದೇ ಸದಸ್ಯ ರಾಷ್ಟ್ರಗಳೂ ಕ್ರಿಕೆಟ್ ಆಡದೇ ಪಂದ್ಯ ಬಹಿಷ್ಕರಿಸುವಂತೆ ಮನ ಒಲಿಸಲು ಹೊರಟಿರುವ ಬಿಸಿಸಿಐಗೆ ತಕ್ಕ ತಿರುಗೇಟು ನೀಡಲು ಪಾಕ್ ಕ್ರಿಕೆಟ್ ನಿಯಂತ್ರಣ ಮಂಡಳಿ ಸಿದ್ಧತೆ ನಡೆಸಿದೆ.
ಬಿಸಿಸಿಐ ಈಗಾಗಲೇ ತನ್ನ ಸದಸ್ಯ ರಾಷ್ಟ್ರಗಳ ಮನ ಒಲಿಸಿ ಪಾಕಿಸ್ತಾವನ್ನು ಕೂಟದಿಂದಲೇ ಬಹಿಷ್ಕರಿಸಲು ಪತ್ರ ಸಿದ್ಧ ಮಾಡಿಕೊಂಡಿದೆ. ಇದನ್ನು ದುಬೈಯಲ್ಲಿ ನಡೆಯಲಿರುವ ಐಸಿಸಿ ಸಭೆಯಲ್ಲಿ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ನೀಡಲು ಯೋಜನೆ ರೂಪಿಸಿದೆ.
ಬಿಸಿಸಿಐ ವಾದಕ್ಕೆ ತಿರುಗೇಟು ನೀಡಲು ಪಿಸಿಬಿ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ. ಅಲ್ಲದೆ, ದ.ಆಫ್ರಿಕಾ ಆಟಗಾರನ ಮೇಲೆ ಜನಾಂಗೀಯ ನಿಂದನೆ ಮಾಡಿದ ಆರೋಪದಲ್ಲಿ ನಾಲ್ಕು ಪಂದ್ಯಗಳ ನಿಷೇಧಕ್ಕೊಳಗಾಗಿರುವ ತನ್ನ ನಾಯಕ ಸರ್ಫರಾಜ್ ಅಹಮ್ಮದ್ ಮೇಲಿನ ನಿಷೇಧ ತೆರವುಗೊಳಿಸಲು ಪಿಸಿಬಿ ಇದೇ ಸಂದರ್ಭದಲ್ಲಿ ಐಸಿಸಿಗೆ ಒತ್ತಾಯಿಸಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.