Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

Pakistan vs Australia test: ಡೇವಿಡ್ ವಾರ್ನರ್ ಗೆ ಗೆಲುವಿನ ವಿದಾಯ

David Warner

Krishnaveni K

ಸಿಡ್ನಿ , ಶನಿವಾರ, 6 ಜನವರಿ 2024 (09:20 IST)
ಸಿಡ್ನಿ: ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಟೆಸ್ಟ್ ಪಂದ್ಯವನ್ನು ಆಸೀಸ್ 8 ವಿಕೆಟ್ ಗಳಿಂದ ಗೆಲ್ಲುವುದರೊಂದಿಗೆ ಡೇವಿಡ್ ವಾರ್ನರ್ ಗೆ ಗೆಲುವಿನ ವಿದಾಯ ಹೇಳಿದೆ.

ಆಸೀಸ್‍ ಆರಂಭಿಕ ದಾಂಡಿಗ ಡೇವಿಡ್ ವಾರ್ನರ್ ಗೆ ಇದು ಕೊನೆಯ ಟೆಸ್ಟ್ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಪಾಕಿಸ್ತಾನ ಮೊದಲ ಇನಿಂಗ್ಸ್ ನಲ್ಲಿ 313 ಮತ್ತು ಆಸೀಸ್ 299 ರನ್ ಗಳಿಸಿತ್ತು. ದ್ವಿತೀಯ ಇನಿಂಗ್ಸ್ ನಲ್ಲಿ ಪಾಕ್ ಕೇವಲ 115 ರನ್ ಗಳಿಗೆ ಆಲೌಟ್ ಆಯಿತು. ಆಸೀಸ್ 2 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿ ಗೆಲುವು ಕಂಡಿತು.

ಜೊತೆಗೆ ಸರಣಿಯನ್ನೂ ವೈಟ್ ವಾಶ್ ಮಾಡಿಕೊಂಡಿತು. ಈ ಮೂಲಕ ಸ್ಟಾರ್ ಆಟಗಾರ ಡೇವಿಡ್ ವಾರ್ನರ್ ಗೆ ಗೆಲುವಿನ ಉಡುಗೊರೆ ನೀಡಿತು. ಅಲ್ಲದೆ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲೂ ಭಾರತವನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೇರಿತು.

ದ್ವಿತೀಯ ಇನಿಂಗ್ಸ್ ನಲ್ಲಿ ಕೊನೆಯ ಬಾರಿಗೆ ಮೈದಾನಕ್ಕಿಳಿದ ಡೇವಿಡ್ ವಾರ್ನರ್ 57 ರನ್ ಗಳಿಸಿದರು. ಈ ಮೂಲಕ ಕೊನೆಯ ಇನಿಂಗ್ಸ್ ನಲ್ಲಿ ಅರ್ಧಶತಕ ಸಿಡಿಸಿದ ದಾಖಲೆ ಮಾಡಿದರು. ಜೊತೆಗೆ ಈ ಇನಿಂಗ್ಸ್ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ ಆಸ್ಟ್ರೇಲಿಯಾ ಪರ ಅತ್ಯಧಿಕ ರನ್ ಗಳಿಸಿದ ಆರಂಭಿಕ ಆಟಗಾರ ಎಂಬ ದಾಖಲೆಯನ್ನೂ ಮಾಡಿದರು.

ಒಟ್ಟು 112 ಟೆಸ್ಟ್ ಪಂದ್ಯವಾಡಿದ ಡೇವಿಡ್ ವಾರ್ನರ್ 3 ದ್ವಿಶತಕ, 26 ಶತಕ, 37 ಅರ್ಧಶತಕಗಳೊಂದಿಗೆ 8783 ಸಾವಿರ ರನ್ ಕಲೆ ಹಾಕಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ: ಭಾರತ-ಪಾಕ್ ಪಂದ್ಯ ದಿನಾಂಕ ಬಹಿರಂಗ