ನವದೆಹಲಿ: ಇಲ್ಲಿ ನಡೆಯಬೇಕಿದ್ದ ಗುಜರಾತ್ ಮತ್ತು ಬಂಗಾಳ ನಡುವಿನ ರಣಜಿ ಕ್ರಿಕೆಟ್ ಪಂದ್ಯ ವಾಯು ಮಾಲಿನ್ಯದಿಂದಾಗಿ ರದ್ದಾಗಿದೆ. ದಟ್ಟ ಹೊಗೆಯಿಂದ ಕೂಡಿದ ದೆಹಲಿಯ ವಾತಾವರಣವೇ ಇದಕ್ಕೆಲ್ಲಾ ಕಾರಣ.
ಮಂಜು ಮುಸುಕಿದಂತಹ ವಾತಾವರಣ ಇದ್ದುದರಿಂದ ಪಂದ್ಯವನ್ನು ರದ್ದುಪಡಿಸಲಾಗಿದ್ದು, ಬೇರೆ ದಿನಾಂಕದಂದು ಪಂದ್ಯ ನಡೆಸಲು ತೀರ್ಮಾನಿಸಲಾಗಿದೆ. ಶನಿವಾರ ಮೊದಲ ದಿನದಾಟವನ್ನು ರದ್ದುಗೊಳಿಸಲಾಗಿತ್ತು. ಆದರೆ ಭಾನುವಾರವೂ ಇದೇ ರೀತಿಯ ವಾತಾವರಣ ಮುಂದುವರಿದಿರುವುದರಿಂದ ಮ್ಯಾಚ್ ರೆಫ್ರಿ ಪಂದ್ಯವನ್ನೇ ರದ್ದುಗೊಳಿಸಲು ತೀರ್ಮಾನಿಸಿದರು.
ಉಭಯ ತಂಡಗಳ ಆಟಗಾರರಿಗೂ ಕಣ್ಣುರಿ ಮತ್ತು ಉಸಿರಾಟದ ಸಮಸ್ಯೆ ಬಂದಿರುವುದಾಗಿ ಹೇಳಿಕೊಂಡಿದ್ದರು. ಹೀಗಾಗಿ ಮ್ಯಾಚ್ ರೆಫ್ರಿ ಪಂದ್ಯ ನಡೆಸದೇ ಇರಲು ನಿರ್ಧರಿಸಿದರು. ಡಿಸೆಂಬರ್ ನಲ್ಲಿ ಮತ್ತೆ ದೆಹಲಿಯಲ್ಲಿ ಮಧ್ಯ ಪ್ರದೇಶದ ವಿರುದ್ಧ ಬಂಗಾಳ ತಂಡ ಆಡಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ