ಇಂಗ್ಲೆಂಡ್`ನಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಕಪ್`ನ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ಮಿಥಾಲಿ ರಾಜ್ ಸತತ 7ನೇ ಅರ್ಧಶತಕ ಸಿಡಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಭಾರತ ತಂಡ ಅತ್ಯುತ್ತಮ ಬ್ಯಾಟಿಂಗ್ ಮಾಡಿದೆ. ಟಾಪ್ ಆರ್ಡರ್`ಗಳಾದ ಸ್ಮೃತಿ ಮಂದನ, ಪೂನಂ ರೌತ್ ಮತ್ತು ನಾಯಕಿ ಮಿಥಾಲಿ ರಾಜ್ ಅವರ ಅರ್ಧಶತಕಗಳ ನೆರವಿನಿಂದ ಇಂಗ್ಲೆಂಡ್`ಗೆ 282 ರನ್`ಗಳ ಬೃಹತ್ ಗುರಿ ನೀಡಿದೆ.
ಅದರಲ್ಲೂ ನಾಯಕಿ ಮಿಥಾಲಿ ರಾಜ್ ಸಿಡಿಸಿದ ಅರ್ಧ ಶತಕ ಹೊಸ ವಿಶ್ವ ದಾಖಲೆ ಬರೆದಿದೆ. ಆಸ್ಟ್ರೇಲಿಯಾದ ಲಿಂಡ್ಸೆ ರೇಲರ್, ಎಲ್ಲಿಸ್ ಪೆರ್ರೆ ಮತ್ತು ಇಂಗ್ಲೆಂಡ್`ನ ಚಾರ್ಲೆಟ್ ಎಡ್ವರ್ಡ್ ಸತತ 6 ಅರ್ಧ ಶತಕ ಸಿಡಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಇದೀಗ, ಮಿಥಾಲಿ ರಾಜ್ ಸತತ 7 ಅರ್ಧ ಶತಕ ಸಿಡಿಸಿ ವಿಶ್ವದ ಮೊದಲಿಗರೆನಿಸಿಕೊಂಡಿದ್ದಾರೆ.
ಮಿಥಾಲಿ ರಾಜ್ ಗಳಿಸಿದ 71 ರನ್`ನಲ್ಲಿ 8 ಅಮೋಘ ಬೌಂಡರಿಗಳಿದ್ದವು. ಭಾರತೀಯ ಮಹಿಳಾ ತಂಡ ವಿಶ್ವಕಪ್ ಗೆಲ್ಲುವ ಫೇವರೀಟ್ ಎನ್ನಲಾಗುತ್ತಿದ್ದು, ಮೊದಲ ಪಂದ್ಯದಲ್ಲೇ ಮಿಥಾಲಿ ರಾಜ್ ತಮ್ಮ ಖದರ್ ತೋರಿಸಿದ್ದಾರೆ. ಇದುವರೆಗೆ ಮಿಥಾಲಿ ರಾಜ್ 47 ಏಕದಿನ ಅರ್ಧ ಶತಕ ಸಿಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ