ವೆಸ್ಟ್ ಇಂಡೀಸ್ ಮತ್ತು ಭಾರತದ ನಡುವೆ ಟಿ20 ಪಂದ್ಯಾವಳಿಗೆ ದೊರೆತಿರುವ ಪ್ರತಿಕ್ರಿಯೆಯನ್ನು ಅನುಸರಿಸಿ ಅಮೇರಿಕದಲ್ಲಿ ಮಿನಿ ಐಪಿಎಲ್ ನಡೆಸುವ ಯೋಜನೆಯನ್ನು ಸದ್ಯಕ್ಕೆ ಕಾಯ್ದಿರಿಸಲಾಗಿದೆ ಎಂದು ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
ಅಮೇರಿಕದಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನು ನಡೆಸಲು ಸಮಯದ ವ್ಯತ್ಯಾಸ ಅಡ್ಡಿಯಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಂಡು ಟೂರ್ನಿಯನ್ನು ಆಯೋಜಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಠಾಕೂರ್ ತಿಳಿಸಿದ್ದಾರೆ.
ಅಮೇರಿಕದಲ್ಲಿ ಹಗಲು ಪಂದ್ಯಗಳನ್ನು ನಡೆಸಿದರೆ ಮಾತ್ರ ಭಾರತದಲ್ಲಿ ರಾತ್ರಿ ಪಂದ್ಯಗಳನ್ನು ಪ್ರಸಾರ ಮಾಡಲು ಸಾಧ್ಯವಾಗುತ್ತದೆ. ವಿದೇಶದಲ್ಲಿ ಪಂದ್ಯಗಳನ್ನು ನಡೆಸಿ ದೇಶಿಯ ಅಭಿಮಾನಿಗಳನ್ನು ಕಳೆದುಕೊಳ್ಳಲಾಗದು. ಹೀಗಾಗಿ ಸ್ವದೇಶಿ ಸಮಯಕ್ಕೆ ಅನುಕೂಲವಾಗುವಂತೆ ಪಂದ್ಯಗಳನ್ನು ಆಯೋಜಿಸಬೇಕಾಗುತ್ತದೆ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.
ಕಳೆದ ಜೂನ್ ತಿಂಗಳಲ್ಲಿ ಯುಎಸ್ಇ ಅಥವಾ ಯುಎಸ್ಎನಲ್ಲಿ ಸೆಪ್ಟಂಬರ್ ತಿಂಗಳಲ್ಲಿ ಮಿನಿ ಐಪಿಎಲ್ ಆಯೋಜಿಸುವ ಯೋಚನೆಯನ್ನು ಬಿಸಿಸಿಐ ಕೈಗೊಂಡಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ