ಸಿಡ್ನಿ: ಟೆಸ್ಟ್ ಸರಣಿಗೂ ಮುನ್ನ ಆಸ್ಟ್ರೇಲಿಯನ್ನರಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಕಟ್ಟಿ ಹಾಕುವ ಚಿಂತೆ ಎದುರಾಗಿದೆ. ಆದರೆ ಆಸೀಸ್ ಮಾಜಿ ವೇಗಿ ಜೇಸನ್ ಗಿಲೆಸ್ಪಿ ತಮ್ಮ ದೇಶದ ಬೌಲರ್ ಗಳಿಗೆ ಸಲಹೆಯೊಂದನ್ನು ಕೊಟ್ಟಿದ್ದಾರೆ.
‘ವಿರಾಟ್ ಕೊಹ್ಲಿಯಂತಹ ಆಟಗಾರರ ಎದುರು ಬೌಲಿಂಗ್ ಅಭ್ಯಾಸ ನಡೆಸಲು ಸಾಧ್ಯವಿಲ್ಲ. ಮೊದಲ ಬಾಲ್ ನಿಂದಲೇ ಅವರಿಗೆ ರನ್ ಗಳಿಸಲು ಪರದಾಡುವಂತೆ ಬಾಲ್ ಎಸೆಯಬೇಕು’ ಎಂದು ಗಿಲೆಸ್ಪಿ ಸಲಹೆ ಕೊಟ್ಟಿದ್ದಾರೆ.
‘ಒಂದು ಅಪ್ಪರ್ ಕಟ್, ಒಂದು ಕಟ್ ಶಾಟ್ ಕೊಹ್ಲಿಯ ಆತ್ಮವಿಶ್ವಾಸವನ್ನೇ ಬದಲಾಯಿಸುತ್ತದೆ. ಕೊಹ್ಲಿ 20 ಬಾಲ್ ಎದುರಿಸಲು ಬಿಟ್ಟು, ಅಷ್ಟರಲ್ಲಿ ಅವರು 10-15 ರನ್ ಗಳಿಸಿದರೆ ಮುಗಿದೇ ಹೋಯಿತು. ಮುಂದೆ ಅವರು ಸುಲಭವಾಗಿ ಇನಿಂಗ್ಸ್ ಕಟ್ಟುಹಾಕುತ್ತಾರೆ. ಹಾಗಾಗಿ ಮೊದಲ ಬಾಲ್ ನಿಂದಲೇ ಬಿಗು ಬೌಲಿಂಗ್ ಮಾಡಿ ಪ್ರತೀ ರನ್ ಗಾಗಿ ಪರದಾಡುವಂತೆ ಮಾಡಬೇಕು’ ಎಂದು ಗಿಲೆಸ್ಪಿ ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.