ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಟೀಂ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಕ್ರೀಡಾ ಸ್ಪೂರ್ತಿ ಮೆರೆದು ಮೆಚ್ಚುಗೆಗೆ ಪಾತ್ರರಾದರು.
ರವೀಂದ್ರ ಜಡೇಜಾ ಬೌಲಿಂಗ್ ನಲ್ಲಿ ಮಾರ್ಕಸ್ ಹ್ಯಾರಿಸ್ ಹೊಡೆದ ಬಾಲ್ ನೇರವಾಗಿ ಮಿಡ್ ಆನ್ ನಲ್ಲಿದ್ದ ಕೆಎಲ್ ರಾಹುಲ್ ಕೈ ಸೇರಿತ್ತು. ಆದರೆ ರಾಹುಲ್ ಮುಂದೆ ಹಾರಿ ಕ್ಯಾಚ್ ಪಡೆಯುವಾಗ ಬಾಲ್ ನೆಲಕ್ಕೆ ತಾಗಿತ್ತು.
ಆದರೆ ಕ್ಯಾಚ್ ಕ್ಲೀನ್ ಆಗಿದೆಯೇ ಎಂದು ಥರ್ಡ್ ಅಂಪಾಯರ್ ಗೆ ರಿವ್ಯೂ ಕೊಡಲು ಸ್ಥಳೀಯ ಅಂಪಾಯರ್ ಇಯಾನ್ ಗ್ಲೌಡ್ ಸನ್ನೆ ಮಾಡಲು ಮುಂದಾದಾಗ ಸ್ವತಃ ರಾಹುಲ್ ಕ್ಯಾಚ್ ಕ್ಲೀನ್ ಆಗಿರಲಿಲ್ಲ ಎಂದು ಸನ್ನೆ ಮಾಡಿ ತಡೆದರು.
ರಾಹುಲ್ ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಕ್ಕೆ ಖುಷಿಯಾದ ಅಂಪಾಯರ್ ಗ್ಲೌಡ್ ಥಮ್ಸ್ ಅಪ್ ಮಾಡಿ ಪ್ರಶಂಸಿಸಿದರು. ಸಹ ಆಟಗಾರರು ರಾಹುಲ್ ಪ್ರಾಮಾಣಿಕೆತೆಗೆ ಮೆಚ್ಚುಗೆ ಸೂಚಿಸಿದರು. ವಿಶೇಷವೆಂದರೆ ಕಳೆದ ಪಂದ್ಯದಲ್ಲಿ ಬಾಲ್ ಥ್ರೋ ಮಾಡುವಾಗ ಎಡವಟ್ಟು ಮಾಡಿ ಇದೇ ಅಂಪಾಯರ್ ಗ್ಲೌಡ್ ಕೈಯಲ್ಲಿ ರಾಹುಲ್ ಬೈಸಿಕೊಂಡಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ