Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಎರಡೇ ಪಂದ್ಯಕ್ಕೆ ಕನ್ನಡಿಗ ಕೆಎಲ್ ರಾಹುಲ್ ಗೆ ಕೊಕ್: ದ್ರಾವಿಡ್ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ

KL Rahul-Axar Patel

Krishnaveni K

ಕೊಲಂಬೊ , ಬುಧವಾರ, 7 ಆಗಸ್ಟ್ 2024 (15:19 IST)
ಕೊಲಂಬೊ: ಹಾಗೆ ನೋಡಿದರೆ ಟೀಂ ಇಂಡಿಯಾದ ಅನುಭವಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸಾಲಿಗೆ ಬಂದು ನಿಲ್ಲಬೇಕಾದ ಕ್ಲಾಸ್ ಪ್ಲೇಯರ್ ಕೆಎಲ್ ರಾಹುಲ್. ಆದರೆ ಇತ್ತೀಚೆಗೆ ಯಾಕೋ ಅವರನ್ನು ಸೈಡ್ ಲೈನ್ ಮಾಡಲಾಗುತ್ತಿದೆ. ಇದೀಗ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಅವಕಾಶ ನೀಡಿದ ಬಳಿಕ ಮೂರನೇ ಪಂದ್ಯದಿಂದ ಅವರನ್ನು ಹೊರಗಿಡಲಾಗಿದೆ.

ಮೊದಲ ಎರಡು ಪಂದ್ಯಗಳಲ್ಲಿ ಆಡಿದ್ದ ಕೆಎಲ್ ರಾಹುಲ್ ಕ್ರಮವಾಗಿ 31 ಮತ್ತು 0 ಸಂಪಾದಿಸಿದ್ದಾರೆ. ಅದರಲ್ಲೂ ಮೊದಲ ಪಂದ್ಯದಲ್ಲಿ ಅಕ್ಸರ್ ಪಟೇಲ್  ಜೊತೆಗೆ ಉಪಯುಕ್ತ ಇನಿಂಗ್ಸ್ ಆಡಿದ್ದರು. ಹೀಗಿದ್ದರೂ ಅವರನ್ನು ಎರಡನೇ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದರು ಎಂಬ ಕಾರಣಕ್ಕೆ ಮೂರನೇ ಪಂದ್ಯದಿಂದಲೇ ಹೊರಗಿಡಲಾಗಿದೆ.

ಶ್ರೇಯಸ್ ಅಯ್ಯರ್, ಶುಬ್ಮನ್ ಗಿಲ್ ನಂತಹ ಆಟಗಾರರಿಗೂ ತಂಡದಲ್ಲಿ ನಿಯಮಿತವಾಗಿ ಸ್ಥಾನ ಸಿಗುತ್ತಿದೆ. ಆದರೆ ಕೆಎಲ್ ರಾಹುಲ್ ನಂತಹ ಆಟಗಾರರಿಗೆ ಅವರ ಅನುಭವ ಪರಿಗಣಿಸಿಯಾದರೂ ಅವಕಾಶ ಕೊಡುತ್ತಿಲ್ಲ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಬಹುಶಃ ದ್ರಾವಿಡ್ ಕೋಚ್ ಆಗಿದ್ದರೆ ರಾಹುಲ್ ಗೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದಿದ್ದಾರೆ.

ದ್ರಾವಿಡ್ ಕೋಚ್ ಆಗಿದ್ದಾಗ ಯಾವುದೇ ಆಟಗಾರನನ್ನು ಒಂದೇ ಪಂದ್ಯದ ವೈಫಲ್ಯತೆಯಿಂದ ಸ್ಥಾನ ವಂಚಿತರಾಗಿ ಮಾಡುತ್ತಿರಲಿಲ್ಲ. ಉದಾಹರಣೆಗೆ ರಜತ್ ಪಾಟೀದಾರ್ ಗೆ ನೀಡಿದ ಅವಕಾಶಗಳೇ ಸಾಕ್ಷಿ. ಆದರೆ ಗಂಭೀರ್ ಕೋಚ್ ಆದ ಬಳಿಕ ರಿಷಬ್ ಪಂತ್ ಗೆ ಅನುಕೂಲ ಮಾಡಿಕೊಡಲು ರಾಹುಲ್ ರನ್ನು ಒಂದೇ ಪಂದ್ಯದಲ್ಲಿ ಫೈಲ್ ಆಗಿದ್ದಕ್ಕೆ ಕಿತ್ತು ಹಾಕಲಾಗಿದೆ ಎಂದು ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಫೈನಲ್ ನಿಂದ ಅನರ್ಹರಾದ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಾದ ಕುಸ್ತಿಪಟು ವಿನೇಶ್ ಫೋಗಟ್