ಮುಂಬೈ: ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿರುವ ಟೀಂ ಇಂಡಿಯಾ ಕ್ರಿಕೆಟಿಗ ಕೇದಾರ್ ಜಾಧವ್ ಐಪಿಎಲ್ ಪಂದ್ಯದ ನಡುವೆ ಗಾಯಗೊಂಡು ಈಗ ಸಂಕಷ್ಟಕ್ಕೀಡಾಗಿದ್ದಾರೆ.
ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ಜಾಧವ್ ಮೇ 5 ರಂದು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ಭುಜದ ನೋವಿಗೆ ತುತ್ತಾಗಿ ತಕ್ಷಣವೇ ಪೆವಿಲಿಯನ್ ಗೆ ಮರಳಿದ್ದರು.
ಇದೀಗ ಅವರು ಪುನಶ್ಚೇತನ ಕಾರ್ಯದಲ್ಲಿ ತೊಡಗಿದ್ದು, ಮೇ 23 ರೊಳಗಾಗಿ ಫಿಟ್ ಆದರೆ ಮಾತ್ರವೇ ವಿಶ್ವಕಪ್ ಆಡಬಹುದಾಗಿದೆ. ಐಸಿಸಿ ನಿಮಯದ ಪ್ರಕಾರ ಯಾವುದೇ ತಂಡ ಮೇ 23 ರೊಳಗಾಗಿ ತನ್ನ ತಂಡದಲ್ಲಿ ಬದಲಾವಣೆ ತರಬಹುದಾಗಿದೆ. ಹೀಗಾಗಿ ಆ ದಿನಕ್ಕೆ ಮೊದಲು ಜಾಧವ್ ಫಿಟ್ ಆದರೆ ವಿಶ್ವಕಪ್ ನಲ್ಲಿ ಆಡುವ ಅವಕಾಶ ಸಿಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ