ಜಮ್ಮು ಕಾಶ್ಮೀರ: ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿ ಫೈನಲ್ ಗೇರಿದ ಪಾಕಿಸ್ತಾನ ತಂಡಕ್ಕೆ ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಮಿರ್ ವಾಯಿಜ್ ಉಮರ್ ಫಾರುಖ್ ಅಭಿನಂದನೆ ಸಲ್ಲಿಸಿದ್ದಾರೆ.
ಭಾರತ ಗೆದ್ದಾಗಲೂ ಇಲ್ಲಿ ಅಷ್ಟು ಸಂಭ್ರಮವಿರೋದಿಲ್ಲ. ಆದರೆ ಪಾಕಿಸ್ತಾನ ಗೆದ್ದ ಸಂಭ್ರಮವನ್ನು ಪ್ರತ್ಯೇಕತಾವಾದಿ ನಾಯಕ ತನ್ನ ಬೆಂಬಲಿಗರೊಂದಿಗೆ ಸಿಹಿ ಹಂಚಿ ಕುಣಿದು ಕುಪ್ಪಳಿಸುವ ಮೂಲಕ ಆಚರಿಸಿಕೊಂಡಿದ್ದಾರೆ.
ಟ್ವಿಟರ್ ನಲ್ಲಿ ತನ್ನ ಸಂಭ್ರಮವನ್ನು ಹಂಚಿಕೊಂಡಿರುವ ಫಾರುಖ್ ಫೈನಲ್ ಗೆ ಬೆಸ್ಟ್ ಆಫ್ ಲಕ್ ಹೇಳಿದ್ದಾರೆ. ಇಂದು ಭಾರತ ಗೆದ್ದರೆ ಫೈನಲ್ ನಲ್ಲಿ ಮತ್ತೆ ಸಾಂಪ್ರದಾಯಿಕ ಎದುರಾಳಿಗಳು ಸೆಣಸಾಡಲಿದ್ದಾರೆ.