ಬೆಂಗಳೂರು: ವಿಶಾಖಪಟ್ಟಣದಲ್ಲಿ ಇಂದು ತಮಿಳುನಾಡು ಕರ್ನಾಟಕ ಕಾದಾಟ ನಡೆಯಲಿದೆ. ಗಾಬರಿಯಾಗಬೇಕಿಲ್ಲ. ಈ ಕಾದಾಟ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಹಣಾಹಣಿಯದ್ದು.
ಈಗಾಗಲೇ ಬಿ ಗುಂಪಿನಿಂದ ಅಗ್ರ ಸ್ಥಾನಿಯಾಗಿ ಬಂದಿರುವ ಕರ್ನಾಟಕ ನಾಕೌಟ್ ಹಂತಕ್ಕೆ ಮೊದಲು ಆತ್ಮವಿಶ್ವಾಸದಲ್ಲಿದೆ. 2014 ನೇ ಸಾಲಿನಲ್ಲಿ ಕರ್ನಾಟಕ ರಣಜಿ ಟ್ರೋಫಿ ಗೆದ್ದ ಮೇಲೆ ಇದೇ ಮೊದಲ ಬಾರಿಗೆ ಉಭಯ ತಂಡಗಳು ಪರಸ್ಪರ ಸೆಣಸಾಡುತ್ತಿವೆ. ಕಳೆದ ಋತುವಿನಲ್ಲಿ ಇಬ್ಬರೂ ನಾಕೌಟ್ ಹಂತದಲ್ಲಿ ಸೋತಿದ್ದವು. ಹಾಗಾಗಿ ಇದು ಒಂಥರಾ ಸಮಬಲದ ಹೋರಾಟ ಎನ್ನಬಹುದು.
ಕರ್ನಾಟಕಕ್ಕೆ ಟೀಂ ಇಂಡಿಯಾದಲ್ಲಿದ್ದ ಮನೀಶ್ ಪಾಂಡೆ, ಕರುಣ್ ನಾಯರ್, ಕೆಎಲ್ ರಾಹುಲ್ ತಂಡಕ್ಕೆ ಮರಳಿರುವುದು ಪ್ಲಸ್ ಪಾಯಿಂಟ್. ನಾಯಕ ವಿನಯ್ ಕುಮಾರ್ ಕೂಡಾ ಇವರ ಸೇರ್ಪಡೆಯಿಂದ ಖುಷಿಯಾಗಿದ್ದಾರೆ. ಆದರೆ ಅತ್ತ ತಮಿಳುನಾಡಿಗೆ ಹಿರಿಯ ಮುರಳಿ ವಿಜಯ್, ರವಿಚಂದ್ರನ್ ಅಶ್ವಿನ್ ಗೈರು ಕಾಡಲಿದೆ.
ಮೇಲ್ನೋಟಕ್ಕೆ ಕರ್ನಾಟಕ ಬಲಿಷ್ಠವಾಗಿದೆ. ಆದರೆ ಅಂತಿಮವಾಗಿ ಯಾರು ಚೆನ್ನಾಗಿ ಆಡುತ್ತಾರೋ ಅವರೇ ಗೆಲ್ಲುತ್ತಾರೆ ಎನ್ನುವುದು ಕ್ರೀಡೆಯ ಸತ್ಯ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ