ದುಬೈ: ಪಾಕಿಸ್ತಾನ ವಿರುದ್ಧ ಏಷ್ಯಾ ಕಪ್ ಕ್ರಿಕೆಟ್ ನ ಮೊದಲ ಪಂದ್ಯದಲ್ಲಿ ಗೆಲುವು ಸಾದಿಸಿದ ಬಳಿಕ ಬಿಸಿಸಿಐ ಕಾರ್ಯದರ್ಶಿ, ಗೃಹ ಸಚಿವ ಅಮಿತ್ ಶಾ ಪುತ್ರ ಜಯ್ ಶಾ ರಾಷ್ಟ್ರಧ್ವಜ ಹಿಡಿಯಲು ನಿರಾಕರಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೊಳಗಾಗಿದ್ದಾರೆ.
ಈ ವಿಡಿಯೋವನ್ನು ಕಾಂಗ್ರೆಸ್ ನಾಯಕರೊಬ್ಬರು ಶೇರ್ ಮಾಡಿದ್ದರು. ಅದಾದ ಬಳಿಕ ಜಯ್ ಶಾ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿದೆ.
ಭಾರತದ ಗೆಲುವಿನ ಬಳಿಕ ಪಕ್ಕದಲ್ಲಿದ್ದ ವ್ಯಕ್ತಿ ಜಯ್ ಶಾಗೆ ಧ್ವಜ ಹಿಡಿದು ಸಂಭ್ರಮಾಚರಿಸಲು ಹೇಳುತ್ತಾರೆ. ಆದರೆ ಜಯ್ ಶಾ ಧ್ವಜ ಪಡೆಯಲು ನಿರಾಕರಿಸುತ್ತಾರೆ.