ಮುಂಬೈ: ಐಪಿಎಲ್ 14 ರ ಎರಡನೇ ಭಾಗಕ್ಕೆ ಮೊದಲು ಟೀಂ ಇಂಡಿಯಾ ಟಿ20 ವಿಶ್ವಕಪ್ ತಂಡ ಪ್ರಕಟಿಸಲಾಗಿತ್ತು. ಈ ತಂಡದಲ್ಲಿ ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಸ್ಥಾನ ಪಡೆದಿದ್ದರು.
ಆದರೆ ಮುಂಬೈ ಇಂಡಿಯನ್ಸ್ ತಂಡದ ಈಇಬ್ಬರು ಯುವ ಆಟಗಾರರು ಯಾಕೋ ಐಪಿಎಲ್ ನಲ್ಲಿ ಕಳಪೆ ಫಾರ್ಮ್ ಮುಂದುವರಿಸಿದ್ದಾರೆ. ಕಳೆದ ನಾಲ್ಕು ಪಂದ್ಯಗಳಿಂದ ಇಬ್ಬರ ಪ್ರದರ್ಶನ ಕಳೆಗುಂದಿದೆ.
ಇಶಾನ್ ಕ್ರಮವಾಗಿ 11, 14 ಮತ್ತು 9 ರನ್ ಗಳಿಸಿದರೆ ಸೂರ್ಯ 3,5, ಮತ್ತು 8 ರನ್ ಗಳಿಸಿದ್ದಾರೆ. ಕಳೆದ ಪಂದ್ಯದಲ್ಲಿ ಇಶಾನ್ ಆಡಿರಲಿಲ್ಲ. ಆದರೆ ಸೂರ್ಯ ಅವಕಾಶ ಸಿಕ್ಕರೂ ಮತ್ತೆ ವಿಫಲರಾಗಿದ್ದಾರೆ. ಹೀಗಾಗಿ ಈ ಇಬ್ಬರು ಇದೇ ಫಾರ್ಮ್ ಮುಂದುವರಿಸಿದರೆ ಬಿಸಿಸಿಐ ಶ್ರೇಯಸ್ ಐಯರ್ ಗೆ ಚಾನ್ಸ್ ಕೊಡುವ ಸಾಧ್ಯತೆಯೂ ಇದೆ ಎಂದು ವರದಿಗಳು ಹೇಳುತ್ತಿವೆ.