ಬೆಂಗಳೂರು: ಬಿಸಿಸಿಐ ಆಡಳಿತ ಮಂಡಳಿ ಐಪಿಎಲ್ ನಡೆಸಲು ಅನುಮತಿ ನೀಡಿದ್ದೇ ತಡ. ಈ ಬಗ್ಗೆ ಕೆಲಸ ಕಾರ್ಯಗಳು ಬಿರುಸಿನಿಂದ ಆರಂಭವಾಗಿದೆ. ಫೆಬ್ರವರಿ 20 ರಂದು ಬೆಂಗಳೂರಿನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ.
ಈ ಮೊದಲು ಬೆಂಗಳೂರಿನ ಬದಲಾಗಿ ಮುಂಬೈನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ ಎಂಬ ಸುದ್ದಿ ಹರಡಿತ್ತು. ಆದರೆ ಬೆಂಗಳೂರಿನಲ್ಲೇ ನಡೆಯುವುದಾಗಿ ಆಡಳಿತ ಮಂಡಳಿ ಹೇಳಿಕೆ ಬಿಡುಗಡೆ ಮಾಡಿದೆ. ನಗರದ ರಿಟ್ಜ್ ಕಾರ್ಟನ್ ಹೋಟೆಲ್ ನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ.
ಪ್ರತೀ ತಂಡವೂ 9 ವಿದೇಶೀ ಆಟಗಾರರನ್ನು ಒಳಗೊಂಡಂತೆ 27 ಆಟಗಾರರನ್ನು ಖರೀದಿಸಬಹುದಾಗಿದೆ. ಬೆಂಗಳೂರಿನಲ್ಲಿ ಇದು ಸತತ ನಾಲ್ಕನೇ ಬಾರಿ ಹರಾಜು ಪ್ರಕ್ರಿಯೆ ನಡೆಯುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ