ಮುಂಬೈ: ಈ ವರ್ಷದ ಐಪಿಎಲ್ ಹರಾಜು ಪ್ರಕ್ರಿಯೆಗೆ ಮೊದಲು ಆಯಾ ಫ್ರಾಂಚೈಸಿಗಳು ಕೆಲವು ಆಟಗಾರರನ್ನು ತಂಡದಿಂದ ಕೈ ಬಿಟ್ಟಿದ್ದು, ಮತ್ತೆ ಈ ಆಟಗಾರರು ಹರಾಜು ಪ್ರಕ್ರಿಯೆಗೊಳಪಡಲಿದ್ದಾರೆ.
ಇವರಲ್ಲಿ ಪ್ರಮುಖರೆಂದರೆ ಮುಂಬೈ ಇಂಡಿಯನ್ಸ್ ನ ಯುವರಾಜ್ ಸಿಂಗ್, ಕೋಲ್ಕೊತ್ತಾ ನೈಟ್ ರೈಡರ್ಸ್ ನ ರಾಬಿನ್ ಉತ್ತಪ್ಪ, ರಾಜಸ್ಥಾನ್ ರಾಯಲ್ಸ್ ನ ಜಯದೇವ್ ಉನಾದ್ಕಟ್ ಮತ್ತಿತರರು. 35 ವಿದೇಶೀ ಆಟಗಾರರನ್ನೊಳಗೊಂಡಂತೆ ಒಟ್ಟು 127 ಆಟಗಾರರನ್ನು ಆಯಾ ಫ‍್ರಾಂಚೈಸಿಗಳು ಮತ್ತೆ ಹರಾಜು ಪ್ರಕ್ರಿಯೆಗೆ ಒಳಪಡಲು ಬಿಟ್ಟಿದೆ.
ಡಿಸೆಂಬರ್ 19 ರಂದು ಕೋಲ್ಕೊತ್ತಾದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಆ ವೇಳೆ ಈ ಆಟಗಾರರನ್ನು ಯಾವ ಫ್ರಾಂಚೈಸಿಗಳು ಕೊಳ್ಳಲಿವೆ ಎಂದು ನೋಡಬೇಕಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ಬಿಟ್ಟು ಉಳಿದೆಲ್ಲಾ ತಂಡಗಳು ತಮ್ಮ ನಾಯಕನನ್ನು ಉಳಿಸಿಕೊಂಡಿವೆ.