ಬೆಂಗಳೂರು: ಐಪಿಎಲ್ 2024 ರಲ್ಲಿ ಪ್ಲೇ ಆಫ್ ಗೇರಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರಮ ಕೆಲವರ ಹೊಟ್ಟೆ ಉರಿಸಿದೆ. ಆರ್ ಸಿಬಿ ಸಂಭ್ರಮಿಸುತ್ತಿರುವ ಪರಿಗೆ ಕೆಕೆಆರ್ ಮೆಂಟರ್ ಗೌತಮ್ ಗಂಭೀರ್ ಸೇರಿದಂತೆ ಸಿಎಸ್ ಕೆ ಅಭಿಮಾನಿಗಳು ಟಾಂಗ್ ಕೊಟ್ಟಿದ್ದಾರೆ.
ಆರ್ ಸಿಬಿ ಮೊನ್ನೆ ಸಿಎಸ್ ಕೆ ವಿರುದ್ಧ ರೋಚಕವಾಗಿ ಪಂದ್ಯ ಗೆದ್ದು ಪ್ಲೇ ಆಫ್ ಗೆ ಅರ್ಹತೆ ಪಡೆಯಿತು. ಈ ಪಂದ್ಯ ಗೆದ್ದ ಬಳಿಕ ಆರ್ ಸಿಬಿ ಆಟಗಾರರು ಮತ್ತು ಫ್ಯಾನ್ಸ್ ಸಂಭ್ರಮ ಮುಗಿಲು ಮುಟ್ಟಿತು. ಆದರೆ ಇದು ಕೆಕೆಆರ್ ತಂಡದ ಮೆಂಟರ್ ಗೌತಮ್ ಗಂಭೀರ್ ಆಕ್ರೋಶಕ್ಕೆ ಕಾರಣವಾಗಿದೆ.
ಪಂದ್ಯ ಗೆದ್ದ ಬಳಿಕ ಆರ್ ಸಿಬಿ ಆಟಗಾರರ ನಡುವಳಿಕೆ ನೋಡಿದರೆ ಟ್ರೋಫಿಯನ್ನೇ ಗೆದ್ದರೇನೋ ಎಂಬಂತಿದೆ. ಇದನ್ನೆಲ್ಲಾ ನೋಡಲಾಗುತ್ತಿಲ್ಲ ಎಂದು ಗಂಭೀರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಸಿಎಸ್ ಕೆ ಅಭಿಮಾನಿಗಳೂ ಆರ್ ಸಿಬಿ ತಂಡದ ಸಂಭ್ರಮವನ್ನು ಅಣಕಿಸಿದ್ದಾರೆ.
ಆರ್ ಸಿಬಿ ಆಟಗಾರರ ಆಟಿಟ್ಯೂಡ್ ನೋಡಿದರೆ ಬಾಂಗ್ಲಾದೇಶ ಕ್ರಿಕೆಟ್ ತಂಡವನ್ನು ನೆನಪಿಸುತ್ತಿದೆ.ಕಪ್ ಗೆದ್ದಿಲ್ಲ ಎಂದು ಇವರಿಗೆ ಯಾರಾದರೂ ನೆನಪು ಮಾಡಬೇಕಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ 5 ಬಾರಿ ಚಾಂಪಿಯನ್ ಆಗಿಯೂ ಆ ತಂಡದ ಆಟಗಾರರ ನಡುವಳಿಕೆ ಎಷ್ಟು ಗೌರವಯುತವಾಗಿದೆ ಗಮನಿಸಬಹುದು. ಆದರೆ ಆರ್ ಸಿಬಿ ಆಟಗಾರರು ಅತಿಯಾಗಿ ಆಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.