ಬೆಂಗಳೂರು: ಐಪಿಎಲ್ 2024 ರಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯಗಳಿಗೆ ನೀರಿನ ಸಮಸ್ಯೆಯಾಗಲ್ಲ. ನಿರಾತಂಕವಾಗಿ ಪಂದ್ಯ ನಡೆಯಲಿದೆ ಎಂದು ಕೆಎಸ್ ಸಿಎ ಸ್ಪಷ್ಟನೆ ನೀಡಿದೆ.
ಬೆಂಗಳೂರಿನಲ್ಲಿ ಕಳೆದ 40 ದಶಕಗಳಲ್ಲೇ ಕಾಣದಷ್ಟು ನೀರಿನ ಕೊರತೆ ಎದುರಾಗಿದೆ. ಕುಡಿಯುವ ನೀರಿಗೂ ಬವಣೆ ಪಡುವ ಪರಿಸ್ಥಿತಿ ಎದುರಾಗಿದೆ. ಕೆಲವು ಏರಿಯಾಗಳಲ್ಲಿ ಎರಡು ದಿನಕ್ಕೊಮ್ಮೆ ಮಾತ್ರ ಸ್ನಾನ ಮಾಡುವ ಪರಿಸ್ಥಿತಿಯಿದೆ. ಹೀಗಾಗಿ ಐಪಿಎಲ್ ಪಂದ್ಯಗಳಿಗೆ ಅಡ್ಡಿ ಎದುರಾಗಬಹುದಾ ಎನ್ನುವ ಆತಂಕ ಎದುರಾಗಿದೆ.
ಆದರೆ ಐಪಿಎಲ್ ಪಂದ್ಯಗಳಿಗೆ ಯಾವುದೇ ಆತಂಕವಿಲ್ಲ ಎಂದು ಕೆಎಸ್ ಸಿಎ ಸ್ಪಷ್ಟಪಡಿಸಿದೆ. ಐಪಿಎಲ್ 2024 ರ ಆರಂಭಿಕ ವೇಳಾಪಟ್ಟಿ ಈಗಾಗಲೇ ಪ್ರಕಟವಾಗಿದೆ. ಆ ಪೈಕಿ ಮೂರು ಪಂದ್ಯಗಳು ಬೆಂಗಳೂರಿನಲ್ಲಿ ನಡೆಯುತ್ತಿದೆ. ಉಳಿದ ವೇಳಾಪಟ್ಟಿ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.
ನಾವು ಸರ್ಕಾರದ ಮತ್ತು ಜಲಮಂಡಳಿಯ ನಿಯಮಗಳಿಗನುಸಾರವಾಗಿಯೇ ನಡೆದುಕೊಳ್ಳಲಿದ್ದೇವೆ. ಪ್ರತೀ ಪಂದ್ಯ ಆಯೋಜಿಸಲು ನಮಗೆ 1,0000 ಲೀ-15000 ಲೀ. ನೀರು ಬೇಕಾಗಬಹುದು. ಅದನ್ನು ಸರ್ಕಾರದ ನಿಯಮಗಳಿಗನುಸಾರವಾಗಿಯೇ ಪಡೆದುಕೊಳ್ಳಲಿದ್ದೇವೆ. ಅದಕ್ಕಾಗಿ ನಾವು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಕೆಎಸ್ ಸಿಎ ಹೇಳಿದೆ.