Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಐಪಿಎಲ್ 2024: ಕೆಎಲ್ ರಾಹುಲ್ ಅನುಪಸ್ಥಿತಿಯಲ್ಲೂ ಗೆದ್ದ ಲಕ್ನೋ ಸೂಪರ್ ಜೈಂಟ್ಸ್

IPL 2024

Krishnaveni K

ಲಕ್ನೋ , ಭಾನುವಾರ, 31 ಮಾರ್ಚ್ 2024 (08:57 IST)
ಲಕ್ನೋ: ಐಪಿಎಲ್ 2024 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯವನ್ನು ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಅನುಪಸ್ಥಿತಿಯಲ್ಲೂ 21 ರನ್ ಗಳಿಂದ ಗೆದ್ದುಕೊಂಡಿದೆ.

ರಾಹುಲ್ ಅನುಪಸ್ಥಿತಿಯಲ್ಲಿ ಲಕ್ನೋ ತಂಡದ ನಾಯಕತ್ವವನ್ನು ನಿಕಲಸ್ ಪೂರನ್ ವಹಿಸಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿತ್ತು. ಇದಕ್ಕೆ ಕಾರಣವಾಗಿದ್ದು ಕ್ವಿಂಟನ್ ಡಿ ಕಾಕ್, ನಿಕಲಸ್ ಪೂರನ್, ಕೃನಾಲ್ ಪಾಂಡ್ಯ ಬ್ಯಾಟಿಂಗ್. ಡಿ ಕಾಕ್ 38 ಎಸೆತಗಳಿಂದ 54, ನಿಕಲಸ್ ಪೂರನ್ 21 ಎಸೆತಗಳಿಂದ 42, ಕೃನಾಲ್ 22 ಎಸೆತಗಳಿಂದ ಅಜೇಯ 43 ರನ್ ಗಳಿಸಿದರು. ಪಂಜಾಬ್ ಪರ ಸ್ಯಾಮ್ ಕ್ಯರೆನ್ 3, ಅರ್ಷ್ ದೀಪ್ ಸಿಂಗ್ 2 ವಿಕೆಟ್ ಕಬಳಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಪಂಜಾಬ್ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಲಷ್ಟೇ ಶಕ್ತವಾಯಿತು. ನಾಯಕ ಶಿಖರ್ ಧವನ್ ಮತ್ತೊಮ್ಮೆ ಮಿಂಚಿ 50 ಎಸೆತಗಳಿಂದ 70 ರನ್ ಚಚ್ಚಿದರು. ಅವರಿಗೆ ಸಾಥ್ ನೀಡಿದ ಇನ್ನೊಬ್ಬ ಆರಂಭಿಕ ಜಾನಿ ಬೇರ್ ಸ್ಟೋ 42 ರನ್ ಗಳಿಸಿದರು. ಲಿಯಾಮ್ ಲಿವಿಂಗ್ ಸ್ಟೋನ್ 28 ರನ್ ಗಳಿಸಿ ಗೆಲುವಿಗೆ ಯತ್ನಿಸಿದರಾದರೂ ಅವರಿಗೆ ತಕ್ಕ ಸಾಥ್ ಸಿಗಲಿಲ್ಲ.

ಇದರಿಂದಾಗಿ ಪಂಜಾಬ್ ಸೋಲು ಕಾಣಬೇಕಾಯಿತು. ಇದು ಪಂಜಾಬ್ ಗೆ ಸತತ ಎರಡನೇ ಸೋಲಾಗಿದೆ. ಲಕ್ನೋ ಪರ ಮಯಾಂಕ್ ಯಾದವ್ ಅದ್ಭುತ ಬೌಲಿಂಗ್ ಮಾಡಿ 3 ವಿಕೆಟ್ ಕಬಳಿಸಿದರು. ಗಂಟೆಗೆ 155.8 ಕಿಮೀ ವೇಗದಲ್ಲಿ ಸತತವಾಗಿ ಚೆಂಡೆಸೆದು ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024: ಕೆಎಲ್ ರಾಹುಲ್ ಟಾಸ್ ಗೆ ಅಲಭ್ಯರಾಗಲು ಕಾರಣ ನೀಡಿದ ನಿಕಲಸ್ ಪೂರನ್