Select Your Language

Notifications

webdunia
webdunia
webdunia
webdunia

ಐಪಿಎಲ್ 2023: ಗುಜರಾತ್ ಎದುರು ಮಂಡಿಯೂರಿದ ಮುಂಬೈ

ಐಪಿಎಲ್ 2023: ಗುಜರಾತ್ ಎದುರು ಮಂಡಿಯೂರಿದ ಮುಂಬೈ
ಅಹಮ್ಮದಾಬಾದ್ , ಬುಧವಾರ, 26 ಏಪ್ರಿಲ್ 2023 (06:20 IST)
ಅಹಮ್ಮದಾಬಾದ್: ಐಪಿಎಲ್ 2023 ರಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 55 ‍ರನ್ ಗಳ ಹೀನಾಯ ಸೋಲು ಕಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ ಪಡೆ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿತು. ಶುಬ್ಮನ್ ಗಿಲ್ 56, ಡೇವಿಡ್ ಮಿಲ್ಲರ್ 46, ಅಭಿನವ್ ಮನೋಹರ್ 42 ರನ್ ಗಳಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ ಪಡೆ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಲಷ್ಟೇ ಶಕ್ತವಾಯಿತು. ಕ್ಯಾಮರೂನ್ ಗ್ರೀನ್ 33, ಸೂರ್ಯಕುಮಾರ್ ಯಾದವ್ 23, ನೇಹಾ ವಧೇರಾ 40 ರನ್ ಗಳಿಸಿದರು. ನಿನ್ನೆ ಮೊದಲ ಬಾರಿಗೆ ಬ್ಯಾಟಿಂಗ್ ಅವಕಾಶ ಪಡೆದ ಅರ್ಜುನ್ ತೆಂಡುಲ್ಕರ್ 13 ರನ್ ಗಳಿಗೆ ಔಟಾದರು. ಇದರೊಂದಿಗೆ ಮುಂಬೈ ಸತತ ಎರಡನೇ ಸೋಲು ಕಂಡಿತು.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆ ಟೀಂ ಇಂಡಿಯಾ ಪ್ರಕಟ: ಯಾರು ಇನ್? ಔಟ್?