Select Your Language

Notifications

webdunia
webdunia
webdunia
webdunia

ಐಪಿಎಲ್ 2023: ಪಂಜಾಬ್ ಗೆ ಮೊದಲ ಸೋಲುಣಿಸಿದ ಹೈದರಾಬಾದ್

ಐಪಿಎಲ್ 2023: ಪಂಜಾಬ್ ಗೆ ಮೊದಲ ಸೋಲುಣಿಸಿದ ಹೈದರಾಬಾದ್
ಹೈದರಾಬಾದ್ , ಸೋಮವಾರ, 10 ಏಪ್ರಿಲ್ 2023 (07:30 IST)
ಹೈದರಾಬಾದ್: ಐಪಿಎಲ್ 2023 ರಲ್ಲಿ ಸತತ ಎರಡು ಪಂದ್ಯಗಳನ್ನು ಗೆದ್ದು ಬೀಗುತ್ತಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 8 ವಿಕೆಟ್ ಗಳ ಸೋಲು ಅನುಭವಿಸಿದೆ.

ಸನ್ ರೈಸರ್ಸ್ ಹೈದರಾಬಾದ್ ಗೆ ಇದು ಈ ಕೂಟದಲ್ಲಿ ಮೊದಲ ಗೆಲುವು ಎನ್ನುವುದು ವಿಶೇಷ. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 20 ಓವರ್ ಗಲಲ್ಲಿ 9 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿತು. ಪಂಜಾಬ್ ಪರ ನಾಯಕ ಶಿಖರ್ ಧವನ್ ಏಕಾಂಗಿ ಹೋರಾಟ ನಡೆಸಿದರು. ಅಜೇಯ 99 ರನ್ ಗಳಿಸುವ ಮೂಲಕ ಧವನ್ ಕೂದಲೆಳೆಯಲ್ಲಿ ಶತಕ ವಂಚಿತರಾದರು.

ಈ ಮೊತ್ತ ಬೆನ್ನತ್ತಿದ ಹೈದರಾಬಾದ್ 17.1 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 145 ರನ್ ಗಳಿಸುವ ಮೂಲಕ ಮೊದಲ ಗೆಲುವು ಪಡೆಯಿತು. ರಾಹುಲ್ ತ್ರಿಪಾಠಿ ಅಜೇಯ 74, ನಾಯಕ ಆಡನ್ ಮಾರ್ಕರನ್ ಅಜೇಯ 37 ರನ್ ಗಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2023: ರಿಂಕು ಸಿಕ್ಸರ್ ಗೆ ದಂಗುಬಡಿದ ಕ್ರಿಕೆಟ್ ಲೋಕ