ಭಾರತೀಯ ಕ್ರಿಕೆಟ್`ನಲ್ಲಿ ಸ್ಪರ್ಧೆ ಜಾಸ್ತಿ. ಪ್ರತಿಭೆಗೆ ತಕ್ಕ ಅವಕಾಶ ಸಿಗುವುದಿಲ್ಲ ಎಂಬ ಆರೋಪವೂ ಇದೆ. ಈ ಆರೋಪಕ್ಕೆ ಇಂಬು ನೀಡುವಂತೆ ಪಂಜಾಬ್`ನ ಪ್ರತಿಭಾವಂತ ಕ್ರಿಕೆಟಿಗನೊಬ್ಬ ಭಾರತದಲ್ಲಿ ಅವಕಾಶ ಸಿಗದೇ ಐರ್ಲೆಂಡ್ ತಂಡ ಸೇರಿದ್ದಾನೆ.
ಪಂಜಾಬ್ ಮೂಲದ ಸಿಮರಂಜೀತ್ ಸಿಂಗ್ ಎಂಬಾತ ಐರ್ಲೆಂಡ್ ರಾಷ್ಟ್ರೀಯ ತಂಡ ಸೇರಿದ್ದಾರೆ. ಸಿಮರಂಜೀತ್ ಸಿಂಗ್ ಪೋಷಕರು ಮೊಹಾಲಿಯಲ್ಲೇ ನೆಲೆಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್`ಗೆ ಪಾದಾರ್ಪಣೆ ಮಾಡಿದ್ದ ಸಿಮರಂಜೀತ್ ಸಿಂಗ್, ಸೆಪ್ಟೆಂಬರ್ 13ರಂದು ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಏಕೈಕ ಏಕದಿನ ಪಂದ್ಯದಲ್ಲೂ ಆಡುತ್ತಿದ್ದಾರೆ. ಐರ್ಲೆಂಡ್`ಗೆ ಟೆಸ್ಟ್ ಮಾನ್ಯತೆಯೂ ಸಿಕ್ಕಿದ್ದು, ಸಿಮರಂಜೀತ್ ಸಿಂಗ್ ಅವರ ಟೆಸ್ಟ್ ಆಡುವ ಅಭಿಲಾಷೆಯೂ ಈಡೇರಲಿದೆ.
ಭಾರತದ ಪರ ನಾನು ಅಂತಾರಾಷ್ಟ್ರೀಯ ಪಂದ್ಯ ಆಡುವುದಿಲ್ಲ. ಐರ್ಲೆಂಡ್ ತಂಡದಲ್ಲಿ ಸದ್ಯದಲ್ಲೇ ಟೆಸ್ಟ್ ಆಡಲಿದ್ದೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಉತ್ತಮ ಆಟವಿದ್ದರೂ ಅಂಡರ್-19 ತಂಡಕ್ಕೆ ಆಯ್ಕೆ ಮಾಡಲಿಲ್ಲ: ಭಾರತದ ಅಂಡರ್-14 ಮತ್ತು ಅಂಡರ್-17 ತಂಡವನ್ನ ಪ್ರತಿನಿಧಿಸಿದ್ದ ಸಿಮರಂಜೀತ್ ಸಿಂಗ್ ಅತ್ಯುತ್ತಮವಾಗಿ ಆಡಿದ್ದರು. 2001ರಲ್ಲಿ ವಿಜಯವಾಡದಲ್ಲಿ ನಡೆದ ನ್ಯಾಶನಲ್ ಸ್ಕೂಲ್ ಗೇಮ್ಸ್`ನಲ್ಲಿ ಸಿಮರಂಜೀತ್ ಸಿಂಗ್ ಬೆಸ್ಟ್ ಪ್ಲೇಯರ್ ಗೌರವಕ್ಕೆ ಪಾತ್ರರಾಗಿದ್ದರು. ಆದರೂ ಅಂಡರ್-19 ತಂಡಕ್ಕೆ ಆಯ್ಕೆ ಮಾಡುವಲ್ಲಿ ಪರಿಗಣಿಸಲಿಲ್ಲ.
ಭಾರತ ತಂಡದಲ್ಲಿ ಆಡಬೇಕೆಂಬ ಕುಟುಂಬದ ಕನಸು ನನಸಾಗದಿದ್ದಾಗ ನೋವಿನಿಂದಲೇ ಸಿಮರಂಜೀತ್ ಸಿಂಗ್ ಹೋಟೆಲ್ ಮ್ಯಾನೇಜ್ ಮೆಂಟ್ ಒದಲು ಐರ್ಲಂಡ್`ಗೆ ತೆರಳಿದರು. ಈ ಸಂದರ್ಭ ಗೆಳೆಯ ಗೌರವ್ ಹೇಳಿದಂತೆ ಐರ್ಲೆಂಡ್ ಕ್ರಿಕೆಟ್ ತಂಡದಲ್ಲಿ ಅವಕಾಶವಿರುವುದು ಸೀಮರಂಜೀತ್ ಸಿಂಗ್ ಗಮನಕ್ಕೆ ಬಂದಿತು. ಈ ಸಂದರ್ಭ ಸೀಮರಂಜೀತ್ ಸಿಂಗ್ ವೀಕೆಂಡ್`ನಲ್ಲಿ ಪಂದ್ಯಕ್ಕೆ 5 ಯೂರೋ ನೀಡಿ ಆಡಲಾರಂಭಿಸಿದರು. ದಿನಸಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸೀಮರಂಜೀತ್ ಸಿಂಗ್ ಅದರಿಂದಲೇ ಹಣ ಹೊಂದಿಸುತ್ತಿದ್ದರು. ಬಳಿಕ ಕೌಂಟಿ ಪಂದ್ಯದಲ್ಲಾಡಿದ ಸಿಂಗ್ 2008ರಲ್ಲಿ ಭಾರತಕ್ಕೆ ಬಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಟ್ರಯಲ್`ನಲ್ಲಿ ಭಾಗವಹಿಸಿದ್ದರು. ಆದರೆ, ತಂಡದಲ್ಲಿ ಸ್ಥಾನ ಸಿಗಲಿಲ್ಲ. ಬಳಿಕ ಡಬ್ಲಿನ್`ಗೆ ವಾಪಸ್ಸಾದ ಸೀಮರಂಜೀತ್ ಸಿಂಗ್ ಸಕ್ಲೈನ್ ಮುಸ್ತಾಕ್ ಬೌಲಿಂಗ್ ವಿಡಿಯೋ ನೋಡಿ ಸ್ಪಿನ್ ಬೌಲಿಂಗ್ ಆರಂಭಿಸಿದರು. ಲೈಸೆಸ್ಟರ್ ಸೀನಿಯರ್ ಕಪ್`ನಲ್ಲಿ 56 ವಿಕೆಟ್ ಉರುಳಿಸಿದ್ದಲ್ಲದೆ, 786 ರನ್ ಹೊಡೆಯುವ ಮೂಲಕ ಆಲ್ರೌಂಡರ್ ಪ್ರದರ್ಶನ ನೀಡಿದರು. ಈ ಅದ್ಬುತ ಪ್ರದರ್ಶನ ಸಿಂಗ್`ಗೆ ಐರ್ಲೆಂಡ್ ರಾಷ್ಟ್ರೀಯ ತಂಡದಲ್ಲಿ ಅವಕಾಶ ಗಿಟ್ಟಿಸಲಿಉ ನೆರವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ