Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಹಿಳಾ ಟಿ20 ವಿಶ್ವಕಪ್: ಮೊದಲ ಪಂದ್ಯದಲ್ಲೇ ಚಾಂಪಿಯನ್ ಆಸ್ಟ್ರೇಲಿಯಾ ಮಣಿಸಿದ ಭಾರತ

ಮಹಿಳಾ ಟಿ20 ವಿಶ್ವಕಪ್: ಮೊದಲ ಪಂದ್ಯದಲ್ಲೇ ಚಾಂಪಿಯನ್ ಆಸ್ಟ್ರೇಲಿಯಾ ಮಣಿಸಿದ ಭಾರತ
ಸಿಡ್ನಿ , ಶುಕ್ರವಾರ, 21 ಫೆಬ್ರವರಿ 2020 (16:40 IST)
ಸಿಡ್ನಿ: ಇಲ್ಲಿ ನಡೆಯುತ್ತಿರುವ ಮಹಿಳೆಯರ ಟಿ20 ವಿಶ್ವಕಪ್ ಕ್ರಿಕೆಟ್ ಕೂಟದಲ್ಲಿ ಮೊದಲ ಪಂದ್ಯದಲ್ಲೇ ಭಾರತದ ವನಿತೆಯರ ತಂಡ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ರೋಚಕವಾಗಿ 17 ರನ್ ಗಳಿಂದ ಸೋಲಿಸಿದೆ.


ಇಂದು ಸಿಡ್ನಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್ ಗಳಲ್ಲಿ 132 ರನ್ ಗಳಿಸಿತು. ಭಾರತದ ಪರ ಶಿಫಾಲಿ ಶರ್ಮಾ 29, ಜೆಮಿಮಾ ರೋಡ್ರಿಗಸ್ 26 ಮತ್ತು ದೀಪ್ತಿ ಶರ್ಮಾ ಅಜೇಯ 49 ರನ್ ಗಳಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಕೊನೆಯ ಹಂತದಲ್ಲಿ ರನ್ ಗಳಿಸಲಾಗದೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ್ದರಿಂದ ಮುಗ್ಗರಿಸಿತು.  ಒಂದು ಹಂತದಲ್ಲಿ 23 ಎಸೆತಗಳಲ್ಲಿ 33 ರನ್ ಗಳಿಸುವ ಸ್ಥಿತಿಯಲ್ಲಿದ್ದ ಆಸ್ಟ್ರೇಲಿಯಾ ಬಳಿಕ ಕೊನೆಯ ಓವರ್ ನಲ್ಲಿ 20 ರನ್ ಗಳಿಸುವ ಸ್ಥಿತಿಗೆ ಬಂದಿತ್ತು. ಅಂತಿಮ ಐದು ಓವರ್ ನಲ್ಲಿ ಭಾರತದ ವನಿತೆಯರು ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದರು. ಇದರಿಂದಾಗಿ ಆಸ್ಟ್ರೇಲಿಯಾ 19.5 ಓವರ್ ಗಳಲ್ಲಿ 115 ರನ್ ಗಳಿಗೆ ಆಲೌಟ್ ಆಯಿತು. ಭಾರತದ ಪರ ಪೂನಂ ಯಾದವ್ 4, ಶಿಖಾ ಪಾಂಡೆ 3  ಮತ್ತು ರಾಜೇಶ್ವರಿ ಗಾಯಕ್ ವಾಡ್ 1 ವಿಕೆಟ್ ಕಬಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ನ್ಯೂಜಿಲೆಂಡ್ ಟೆಸ್ಟ್: ಟೀಂ ಇಂಡಿಯಾ ಜತೆಗೆ ಮಳೆಯ ಜತೆಯಾಟ