ನವದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡ ಏಷ್ಯಾ ಕಪ್ ನಲ್ಲಿ ಭಾಗವಹಿಸಲಿದೆ. ಆದರೆ ಪಾಕಿಸ್ತಾನದೊಂದಿಗೆ ಆಡುವ ಕುರಿತು ಇನ್ನೂ ನಿರ್ಧರಿಸಿಲ್ಲ ಎಂದು ಬಿಸಿಸಿಐ ದೃಢಪಡಿಸಿದೆ.
ನವಂಬರ್ 29 ರಂದು ಭಾರತ ತಂಡ ಪಾಕಿಸ್ತಾನ ತಂಡದೊಂದಿಗೆ ಸೆಣಸಬೇಕಿತ್ತು. ಆದರೆ ಈ ಪಂದ್ಯ ಆಡಬೇಕೋ ಬೇಡವೋ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ ಎಂದು ಬಿಸಿಸಿಐ ಜಂಟಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಹೇಳಿದ್ದಾರೆ.
ಐಸಿಸಿ ಚಾಂಪಿಯನ್ಸ್ ಶಿಪ್ ಅಂಗವಾಗಿ ಆಗಸ್ಟ್ 1 ರಿಂದ ಅಕ್ಟೋಬರ್ 31 ರೊಳಗಾಗಿ ಭಾರತ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡಬೇಕಿತ್ತು. ಆದರೆ ಆಡದೇ ಇರುವ ಕಾರಣ ಐಸಿಸಿ ಭಾರತ ಮಹಿಳಾ ತಂಡಕ್ಕೆ ಆರು ಅಂಕಗಳನ್ನು ಕಳೆಯುವ ಶಿಕ್ಷೆ ವಿಧಿಸಿತ್ತು. ಏಷ್ಯಾ ಕಪ್ ಕ್ರಿಕೆಟ್ ಪಂದ್ಯ ಬ್ಯಾಂಕಾಕ್ ನ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ