ಬರ್ಮಿಂಗ್ ಹ್ಯಾಮ್`ನಲ್ಲಿ ನಡೆಯುತ್ತಿರುವ 2ನೇ ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೆಶ ತಂಡ ಭಾರತಕ್ಕೆ 265 ರನ್ ಟಾರ್ಗೆಟ್ ನೀಡಿದೆ.
ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಾಂಗ್ಲಾದೇಶಕ್ಕೆ ಬ್ಯಾಟಿಂಗ್ ಆಹ್ವಾನ ಕೊಟ್ಟರು. ಮೊದಲ ಓವರ್`ನಲ್ಲೇ ಸೌಮ್ಯ ಸರ್ಕಾರ್`ಗೆ ಪೆವಿಲಿಯನ್ ಹಾದಿ ತೋರಿಸಿದ ಭುವಿ ನಾಯಕ ನಿರ್ಧಾರ ಸಮರ್ಥಿಸಿಕೊಳ್ಳುವಂತೆ ಬೌಲ್ ಮಾಡಿದರು. 36 ರನ್ ಆಗುವಷ್ಟರಲ್ಲಿ ಬಾಂಗ್ಲಾ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬಳಿಕ ಕ್ರೀಸ್`ಗೆ ಕಚ್ಚಿ ನಿಂತ ತಮಿಮ್ ಇಕ್ಬಾಲ್(70) ಮತ್ತು ಮುಶ್ಫಿಕರ್ ರೆಹಮಾನ್(61) ಸ್ಕೋರನ್ನ 150 ರನ್ ಗಡಿ ದಾಟಿಸಿದರು. ಬಳಿಕ ನಿಯಮಿತವಾಗಿ ವಿಕೆಟ್ ಕಳೆದುಕೊಂಡ ಬಾಂಗ್ಲಾದೇಶ 50 ಓವರ್`ಗಳಿಗೆ 264/7 ರನ್ ಕಲೆಹಾಕಿತು.
ಭಾರತದ ಪರ ಅತ್ಯುತ್ತಮ ಬೌಲಿಂಗ್ ಮಾಡಿದ ಜಸ್ಪ್ರೀತ್ ಬುಮ್ರಾ ಭುವನೇಶ್ವರ್ ಕುಮಾರ್ ಮತ್ತು ಕೇದಾರ್ ಜಾದವ್ ತಲಾ 2 ವಿಕೆಟ್ ಪಡೆದರು. ಬಾಂಗ್ಲಾದೇಶದ ಬೌಲಿಂಗ್ ಪಡೆ ಕೂಡ ಪ್ರಬಲವಾಗಿದ್ದು, ಭಾರತ ತಂಡ ಚ್ಚರಿಕೆ ಆಟವಾಡಬೇಕಿದೆ. ಗೆದ್ದ ತಂಡ ಜೂನ್ 18ರಂದು ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟ್ರೋಫಿಗಾಗಿ ಸೆಣೆಸಲಿದೆ.