ದುಬೈ: ಕ್ರಿಕೆಟಿಗರು ಆಗಾಗ ಮೈದಾನದಲ್ಲಿ ತಲೆಗೆ ಪೆಟ್ಟು ಮಾಡಿಕೊಳ್ಳುತ್ತಿರುವುದು ಇತ್ತೀಚೆಗಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಐಸಿಸಿ ಆಟಗಾರರಿಗೆ ಹೊಸ ಹೆಲ್ಮೆಟ್ ನೀತಿ ಜಾರಿ ಮಾಡಲು ಉದ್ದೇಶಿಸಿದೆ.
ಈ ನಿಯಮವನ್ನು ಮುರಿದವರಿಗೆ ತಕ್ಕ ದಂಡ ವಿಧಿಸಲಿದೆ. ಇನ್ನು ಮುಂದೆ ಕ್ರಿಕೆಟಿಗರು ಧರಿಸುವ ಹೆಲ್ಮೆಟ್ ಬ್ರಿಟಿಷ್ ಗುಣಮಟ್ಟ ಬಿಎಸ್ 7928:2013 ರನ್ನು ತಲುಪಬೇಕು. ಇದನ್ನು ಈಗಾಗಲೇ ಇಂಗ್ಲೆಂಡ್ ಕ್ರಿಕೆಟಿಗರು ಪಾಲಿಸುತ್ತಿದ್ದಾರೆ.
ಒಂದು ವೇಳೆ ಈ ಗುಣಮಟ್ಟದ ಹೆಲ್ಮೆಟ್ ಧರಿಸದೇ ಕಣಕ್ಕಿಳಿದರೆ ತಕ್ಕ ಬೆಲೆ ತೆರಬೆಕಾದೀತು ಎಂದು ಐಸಿಸಿ ಎಚ್ಚರಿಸಿದೆ. ಫೆಬ್ರವರಿ 1 ರಿಂದ ಈ ನಿಯಮ ಜಾರಿಗೆ ಬರಲಿದೆ. ಎರಡು ಬಾರಿ ಆಟಗಾರರು ಹೆಲ್ಮೆಟ್ ನಿಯಮಾವಳಿ ಮುರಿದರೆ ದಂಡ ಮತ್ತು ಮೂರನೇ ಬಾರಿ ಮುರಿದರೆ ಒಂದು ಪಂದ್ಯದ ನಿಷೇಧ ಎದುರಿಸಬೇಕಾದೀತು ಎಂದು ಐಸಿಸಿ ಎಚ್ಚರಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ