ಲಂಡನ್: ವಿಶ್ವಕಪ್ ನಲ್ಲಿ ದ.ಆಫ್ರಿಕಾ ವಿರುದ್ಧ ಆಡುವಾಗ ವಿಕೆಟ್ ಕೀಪರ್ ಧೋನಿ ಬಳಸಿದ್ದ ಭಾರತೀಯ ಸೇನೆಯ ಬಲಿದಾನ ಚಿಹ್ನಯನ್ನು ತೆಗೆಯಲೇ ಬೇಕು ಎಂದು ಐಸಿಸಿ ಒತ್ತಾಯಿಸಿದೆ.
ಯಾವುದೇ ವೈಯಕ್ತಿಕ ಸಂದೇಶಗಳನ್ನು ಕ್ರೀಡಾಕೂಟದಲ್ಲಿ ಸಾರುವುದು ನಿಯಮಗಳಿಗೆ ವಿರುದ್ಧ ಎನ್ನುವುದು ಐಸಿಸಿ ಪ್ರತಿಪಾದನೆ. ಧೋನಿ ಈ ಚಿಹ್ನೆ ಬಳಸಿರುವುದಕ್ಕೆ ಬಿಸಿಸಿಐ ಸೇರಿದಂತೆ ಭಾರತೀಯ ಅಭಿಮಾನಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ಐಸಿಸಿ ಮಾತ್ರ ಧೋನಿ ಈ ಚಿಹ್ನೆ ಬಳಸಬಾರದು ಎಂದು ತಾಕೀತು ಮಾಡಿದೆ.
ಒಂದು ಹಂತದಲ್ಲಿ ಭಾರತೀಯ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಐಸಿಸಿ ತನ್ನ ನಿರ್ಧಾರ ಮರುಪರಿಶೀಲಿಸುವ ತೀರ್ಮಾನಕ್ಕೆ ಬಂದಿತ್ತಾದರೂ ಇದರಿಂದ ಇತರ ಕ್ರಿಕೆಟ್ ರಾಷ್ಟ್ರಗಳಿಗೆ ಬೇರೆ ಸಂದೇಶ ರವಾನಿಸಿದಂತಾಗುತ್ತದೆ ಎಂಬ ಕಾರಣ ಐಸಿಸಿ ತನ್ನ ಮೊದಲಿನ ನಿರ್ಧಾರವನ್ನೇ ಪ್ರಕಟಿಸಿದೆ.