ಸಿಡ್ನಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ತಂಡಕ್ಕೆ ಹೊಸಬರು ಬಂದರೆ ಅವರನ್ನು ಹೇಗೆ ತಂಡದಲ್ಲಿ ಒಬ್ಬರಾಗಿ ಟ್ರೀಟ್ ಮಾಡ್ತಾರೆ ಗೊತ್ತಾ?
ಈ ಬಗ್ಗೆ ಕೊಹ್ಲಿ ತಮ್ಮ ಆಪ್ ನಲ್ಲಿ ಮಾಡಿದ ಸಂದರ್ಶನವೊಂದರಲ್ಲಿ ಬಾಯ್ಬಿಟ್ಟಿದ್ದಾರೆ. ಹೊಸದಾಗಿ ತಂಡಕ್ಕೆ ಬರುವ ಕ್ರಿಕೆಟಿಗರಿಗೆ ಇರಿಸು ಮುರಿಸಾಗದಂತೆ ತಂಡದಲ್ಲಿ ಒಬ್ಬನಂತೆ ಎಂಬ ಭಾವನೆ ಮೂಡಲು ತಾವೇನು ಮಾಡುತ್ತೇವೆಂಬುದನ್ನು ಕೊಹ್ಲಿ ಹೇಳಿದ್ದಾರೆ.
‘ನಾನು ಒಬ್ಬ ಹಿರಿಯ ಕ್ರಿಕೆಟಿಗ ಎಂದು ವರ್ತಿಸುವುದೇ ಇಲ್ಲ. ನಾನು ಹಾಗೆ ಅಂದುಕೊಳ್ಳುವುದೇ ಇಲ್ಲ. ಇತರರ ಜತೆಗೂ ಹಾಗೇ ಇರುತ್ತೇನೆ. ಹೊಸ ಕ್ರಿಕೆಟಿಗರು ತಂಡಕ್ಕೆ ಬಂದಾಗ ನನ್ನ ಬಳಿ ಏನನ್ನೋ ಹೇಳಲು ಭಾರೀ ಗೌರವ ಕೊಟ್ಟುಕೊಂಡು ಗಂಭೀರವಾಗಿ ಹೇಳುತ್ತಿದ್ದರೆ ನಾನು ಜೋಕ್ ಮಾಡುತ್ತೇನೆ. ಇಷ್ಟೊಂದು ಗಂಭೀರವಾಗಿ ಇರಬೇಕಾಗಿಲ್ಲ ಎಂದು ಏನಾದರೂ ಜೋಕ್ ಮಾಡಿ ಅವರನ್ನು ಸಹಜವಾಗಿರಲು ಪ್ರಯತ್ನಿಸುತ್ತೇನೆ. ನನಗೆ ತಮ್ಮೊಳಗೇ ಮುಚ್ಚಿಟ್ಟುಕೊಳ್ಳದೇ ಎಲ್ಲವನ್ನೂ ಹಂಚಿಕೊಳ್ಳುವ ಆಟಗಾರರು ಇಷ್ಟ’ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ