ದುಬೈ: ದ.ಆಫ್ರಿಕಾ ಮತ್ತು ಪಾಕಿಸ್ತಾನ ನಡುವೆ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆಫ್ರಿಕಾ ಬ್ಯಾಟ್ಸ್ ಮನ್ ಹಶೀಮ್ ಆಮ್ಲಾ ಶತಕ ದಾಖಲಿಸಿ ವೈಯಕ್ತಿಕವಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಾಖಲೆ ಮುರಿದರು.
ಆದರೆ ಆಮ್ಲಾ ದಾಖಲೆ ಮುರಿದರೂ ಅವರನ್ನು ಯಾರೂ ಹೊಗಳಲಿಲ್ಲ, ಬದಲಾಗಿ ಟೀಕಿಸುತ್ತಿದ್ದಾರೆ. ಅದಕ್ಕೆ ಕಾರಣ, ಗೆಲುವಿಗೆ ಕೇವಲ 262 ರನ್ ಬೇಕಾಗಿದ್ದರೂ ತೀರಾ ನಿಧಾನಗತಿಯ ಇನಿಂಗ್ಸ್ ಆಡಿದ ಆಮ್ಲಾ 120 ಬಾಲ್ ಗಳಲ್ಲಿ 108 ರನ್ ಗಳಿಸಿದರು. ಇದರಿಂದಾಗಿ ಆಫ್ರಿಕಾ ಸೋಲನುಭವಿಸಿತು.
ಆದರೆ ಆಮ್ಲಾ ಏಕದಿನ ಪಂದ್ಯಗಳಲ್ಲಿ ಅತೀ ವೇಗದ 27 ನೇ ಶತಕ ದಾಖಲಿಸಿ ಕೊಹ್ಲಿ ದಾಖಲೆ ಮುರಿದರು. ಆಮ್ಲಾ ಈ ದಾಖಲೆ ಮಾಡಲು 167 ಇನಿಂಗ್ಸ್ ಆಡಿದ್ದಾರೆ. ಆದರೆ ಕೊಹ್ಲಿಗೆ 169 ಇನಿಂಗ್ಸ್ ಬೇಕಾಗಿತ್ತು.
ಹಾಗಿದ್ದರೂ ತಮ್ಮ ವೈಯಕ್ತಿಕ ದಾಖಲೆ ಮಾಡಲು ತಂಡದ ಹಿತಾಸಕ್ತಿಯನ್ನೇ ಬದಿಗೊತ್ತಿದರು ಎಂದು ಆಮ್ಲಾ ದಾಖಲೆಯನ್ನು ಇದೀಗ ಆಫ್ರಿಕಾ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಿಗ್ಗಾ ಮುಗ್ಗಾ ಟೀಕಿಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ