Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಈ ಯುವ ಆಟಗಾರನಿಂದ ಕೆಎಲ್ ರಾಹುಲ್ ಗೆ ಕಂಟಕ?

ಈ ಯುವ ಆಟಗಾರನಿಂದ ಕೆಎಲ್ ರಾಹುಲ್ ಗೆ ಕಂಟಕ?
ಸೌಥಾಂಪ್ಟನ್ , ಗುರುವಾರ, 30 ಆಗಸ್ಟ್ 2018 (09:09 IST)
ಸೌಥಾಂಪ್ಟನ್: ಟೀಂ ಇಂಡಿಯಾಗೆ ಯಾರೇ ಬರುವುದಿದ್ದರೂ ಕೆಎಲ್ ರಾಹುಲ್ ಸ್ಥಾನ ಬಿಟ್ಟುಕೊಡುವುದು ಇತ್ತೀಚೆಗೆ ಯಾಕೋ ಸಾಮಾನ್ಯವಾಗಿಬಿಟ್ಟಿದೆ. ಇದೀಗ ಯುವ ಪೃಥ್ವಿ ಶಾಗಾಗಿ ರಾಹುಲ್ ಸ್ಥಾನ ಬಿಟ್ಟುಕೊಡಬೇಕು ಎಂಬ ಒತ್ತಾಯ ಟ್ವಿಟರಿಗರಿಂದ ಕೇಳಿಬಂದಿದೆ.

ಇಂಗ್ಲೆಂಡ್ ವಿರುದ್ಧ ಇಂದಿನಿಂದ ಆರಂಭವಾಗಲಿರುವ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಪ್ರತಿಭಾವಂತ ಪೃಥ್ವಿ ಶಾಗೆ ಸ್ಥಾನ ನೀಡಲು ಕೆಎಲ್ ರಾಹುಲ್ ಹೊರಗುಳಿಯಲಿ ಎಂದು ಟ್ವಿಟರಿಗರು ಆಗ್ರಹಿಸುತ್ತಿದ್ದಾರೆ.

ಕೆಎಲ್ ರಾಹುಲ್ ಗಿಂತ ಪೃಥ್ವಿ ಶಾ ಎ ತಂಡಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ರಾಹುಲ್ ಸ್ಥಾನದಲ್ಲಿ ಶಾರನ್ನು ಆಡಿಸುವುದು ಉತ್ತಮ. ರಾಹುಲ್ ಸ್ಲಿಪ್ ನಲ್ಲಿ ಉತ್ತಮ ಫೀಲ್ಡಿಂಗ್ ಮಾಡಿದ್ದಾರೆಂದು ಅವರನ್ನು ತಂಡದಲ್ಲಿ ಉಳಿಸಬೇಡಿ ಎಂದು ಟ್ವಿಟರಿಗರು ಆಗ್ರಹಿಸುತ್ತಿದ್ದಾರೆ. ಯಾರು ಬಲ್ಲರು? ವಿರಾಟ್ ಕೊಹ್ಲಿ ಕೂಡಾ ಯುವ ಆಟಗಾರನಿಗೆ ಮಣೆ ಹಾಕಿದರೂ ಅಚ್ಚರಿಯಿಲ್ಲ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರಿದಿಗೆ ‘ಬೂಮ್ ಬೂಮ್ ಅಫ್ರಿದಿ’ ಎಂದು ಹೆಸರಿಟ್ಟವರು ಯಾರು ಗೊತ್ತೇ?