ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್`ನಲ್ಲಿ ಉಗ್ರರ ಗುಂಡೇಟಿನಿಂದ ಹುತಾತ್ಮರಾದ ಎಎಸ್ಐ ಅಬ್ದುಲ್ ರಶೀದ್ ಮಗಳು ಜೋಹ್ರಾ ಕಣ್ಣಿರು ಹೊರೆಸಲು ಕ್ರಿಕೆಟಿಗ ಗೌತಮ್ ಗಂಭೀರ್ ಮುಂದಾಗಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಗೌತಮ್ ಗಂಭೀರ್ ಹುತಾತ್ಮ ಪೊಲೀಸ್ ಅಧಿಕಾರಿಗೆ ಗೌರವ ಸಲ್ಲಿಸಿದ್ದು, ಮಗಳು ಜೋಹ್ರಾಗೆ ಶಿಕ್ಷಣಕ್ಕೆ ನೆರವು ನೀಡುವ ಭರವಸೆ ನೀಡಿದ್ದಾರೆ. ಮೊದಲ ಟ್ವೀಟ್`ನಲ್ಲಿ ``ಜೋಹ್ರಾ ಲಾಲಿ ಹಾಡಿ ನಿನ್ನನ್ನ ಮಲಗಿಸಲು ನನ್ನಿಂದ ಸಾಧ್ಯವಾಗದಿರಬಹುದು. ಆದರೆ, ಮೇಲೆದ್ದು ನಿನ್ನ ಕನಸುಗಳನ್ನ ಸಾಕಾರಗೊಳಿಸಲು ನಾನು ನೆರವು ನೀಡಬಲ್ಲೆ. ಜೀವನ ಪರ್ಯಂತ ನಿನ್ನ ವಿದ್ಯಾಭ್ಯಾಸಕ್ಕೆ ನೆರವು ನೀಡುತ್ತೇನೆ. #daughterofIndia’ ಎಂದು ಹೇಳಿದ್ದಾರೆ.
ಮತ್ತೊಂದು ಟ್ವೀಟ್`ನಲ್ಲಿ ಜೋಹ್ರಾ ಧೈರ್ಯ ಹೇಳಿರುವ ಗಂಭೀರ್,` `ಜೋಹ್ರಾ ನಿನ್ನ ಕಣ್ಣಿರನ್ನ ನೆಲದ ಮೇಲೆ ಬೀಳಲು ಬಿಡಬೇಡ. ಭೂಮಿ ತಾಯಿಗೂ ನಿನ್ನ ನೋವಿನ ಭಾರ ಹೊರುವ ಶಕ್ತಿ ಇದೆಯಾ ಎಂಬ ಬಗ್ಗೆ ಅನುಮಾನವಿದೆ. ನಿನ್ನ ತಂದೆ ಹುತಾತ್ಮ ಎಎಸ್ಐ ಅಬ್ದುಲ್ ರಶೀದ್ ಅವರಿಗೆ ವಂದನೆಗಳು’ ಎಂದಿದ್ದಾರೆ.
ರಶೀಧ್ ಅಂತ್ಯಸಂಸ್ಕಾರದ ವೇಳೆ ಅಳುತ್ತಿದ್ದ ಮಗಳ ಫೋಟೋ ಜೊತೆ ಟ್ವಿಟ್ ಮಾಡಿರುವ ಗಂಭೀರ್ ನೆರವಿನ ಹಸ್ತ ಚಾಚಿದ್ದಾರೆ. ಈ ಹಿಂದೆ ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ ಸಿಆರ್`ಪಿಎಫ್ ಯೋಧರ ಮಕ್ಕಳ ಚಿಕಿತ್ಸೆ ವೆಚ್ಚ ಭರಿಸುವುದಾಗಿ ಗಂಭೀರ್ ಘೋಷಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ