Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮುಖ್ಯ ಕೋಚ್ ಸ್ಥಾನದಿಂದ ಗೌತಮ್ ಗಂಭೀರ್ ವಜಾ: ಬಿಸಿಸಿಐ ನಿರ್ಧಾರದ ಡೀಟೈಲ್ಸ್ ಇಲ್ಲಿದೆ

Gautam Gambhir

Krishnaveni K

ಮುಂಬೈ , ಶನಿವಾರ, 9 ನವೆಂಬರ್ 2024 (14:22 IST)
ಮುಂಬೈ: ಟೀಂ ಇಂಡಿಯಾದ ಇತ್ತೀಚೆಗೆ ಕಳಪೆ ಪ್ರದರ್ಶನದಿಂದ ಅಸಮಾಧಾನಗೊಂಡಿರುವ ಬಿಸಿಸಿಐ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರನ್ನು ಕಿತ್ತೊಗೆಯಲು ತೀರ್ಮಾನಿಸಿದೆ ಎಂಬ ಸುದ್ದಿಯಿದೆ.

ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 3-0 ಅಂತರದಿಂದ ಹೀನಾಯವಾಗಿ ಸೋತಿತ್ತು. ಇದರಿಂದ ಭಾರತ ವಿಶ್ವ ಕ್ರಿಕೆಟ್ ಎದುರು ತಲೆತಗ್ಗಿಸುವಂತಾಗಿದೆ. ಇದು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದೆ. ಇದೇ ಕಾರಣಕ್ಕೆ ಗೌತಮ್ ಗಂಭೀರ್ ಗೆ ಖಡಕ್ ಎಚ್ಚರಿಕೆಯನ್ನೂ ನೀಡಿದೆಯಂತೆ.

ಮುಂಬರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಗಂಭೀರ್ ಪಾಲಿಗೆ ಡೆಡ್ ಲೈನ್ ಆಗಿದೆ. ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಲೇಬೇಕು. ಇಲ್ಲದೇ ಇದ್ದರೆ ಅದೇ ಕೊನೆ ಸರಣಿಯಾಗಲಿದೆ ಎಂದು ಗೌತಮ್ ಗಂಭೀರ್ ಗೆ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಐಪಿಎಲ್ ನಲ್ಲಿ ಸಕ್ಸಸ್ ಬಳಿಕ ಭಾರೀ ನಿರೀಕ್ಷೆಯೊಂದಿಗೆ ರಾಹುಲ್ ದ್ರಾವಿಡ್ ಸ್ಥಾನಕ್ಕೆ ಗಂಭೀರ್ ರನ್ನು ಕರೆತರಲಾಗಿತ್ತು. ಅವರು ಕೇಳಿದ ಸಹಾಯಕ ಸಿಬ್ಬಂದಿ, ಸೌಲಭ್ಯಗಳೆಲ್ಲವನ್ನೂ ನೀಡಲಾಗಿತ್ತು.

ಹಾಗಿದ್ದರೂ ಭಾರತ ಇದುವರೆಗೆ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಹೀಗಾಗಿ ಒಂದು ವೇಳೆ ಆಸ್ಟ್ರೇಲಿಯಾ ಸರಣಿಯಲ್ಲೂ ವಿಫಲರಾದರೆ ಗಂಭೀರ್ ತಮ್ಮ ಗುತ್ತಿಗೆ ಅವಧಿ ಮುಗಿಯುವವರೆಗೂ ಕೇವಲ ಟಿ20, ಏಕದಿನ ಮಾದರಿಗೆ ಮಾತ್ರ ನಾಯಕರಾಗಿ ಮುಂದುವರಿಯಲಿದ್ದಾರೆ. ಟೆಸ್ಟ್ ಮಾದರಿಗೆ ಬಿಸಿಸಿಐ ಹೊಸ ಕೋಚ್ ನೇಮಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಜು ಸ್ಯಾಮ್ಸನ್ ಗಾಗಿ ಮೈದಾನದಲ್ಲೂ ಎದುರಾಳಿಗಳ ಜೊತೆ ಸೂರ್ಯಕುಮಾರ್ ಯಾದವ್ ಕಿತ್ತಾಟ