ನವದೆಹಲಿ: ಟೀಂ ಇಂಡಿಯಾದಿಂದ ಹಿರಿಯ ವಿಕೆಟ್ ಕೀಪರ್ ಧೋನಿ ನಿವೃತ್ತಿಯಾಗಬೇಕೋ ಬೇಡವೋ ಎಂಬ ಚರ್ಚೆಗಳ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ತಮ್ಮ ಅಭಿಪ್ರಾಯ ಹೇಳಿದ್ದಾರೆ.
ಧೋನಿ ನಿವೃತ್ತಿಯಾಗುವುದು ಬೇಡ ಎನ್ನುವರರಿಗೆ ಗಂಭೀರ್ ಟಾಂಗ್ ಕೊಟ್ಟಿದ್ದಾರೆ. ಧೋನಿ ಮತ್ತು ಕೊಹ್ಲಿ ಮೇಲೆ ಗಂಭೀರ್ ಆಗಾಗ ಕಿಡಿ ಕಾರುತ್ತಲೇ ಇರುತ್ತಾರೆ. ಇದೀಗ ಧೋನಿಗಿಂತ ದೇಶವೇ ದೊಡ್ಡದು ಎನ್ನುವ ಮೂಲಕ ಧೋನಿ ನಿವೃತ್ತಿಯಾಗಲಿ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ನಿವೃತ್ತಿ ಎನ್ನುವುದು ಪ್ರತಿಯೊಬ್ಬ ಆಟಗಾರನ ವೈಯಕ್ತಿಕ ನಿರ್ಧಾರ. ಹಾಗಿದ್ದರೂ ಭವಿಷ್ಯದ ಬಗ್ಗೆಯೂ ಯೋಚಿಸಬೇಕಾಗುತ್ತದೆ. ಧೋನಿ ವಿಚಾರದಲ್ಲೂ ಇದೇ ರೀತಿ, ಭವಿಷ್ಯದ ದೃಷ್ಟಿಯಿಂದ ಹೊಸಬರಿಗೆ ಅವಕಾಶ ನೀಡಬೇಕಾಗಿದೆ. ಕೊಹ್ಲಿಯಿರಲಿ, ಯಾರೇ ನಾಯಕನಾಗಿರಲಿ, ಧೋನಿ ಬಳಿ ನೀವು ಮುಂದಿನ ವಿಶ್ವಕಪ್ ತಂಡದಲ್ಲಿರಲ್ಲ ಎಂದು ಹೇಳುವ ಧೈರ್ಯ ಮಾಡಬೇಕು. ಅಂತಿಮವಾಗಿ ಒಬ್ಬ ಆಟಗಾರನಿಗಿಂತ ದೇಶ, ತಂಡ ಮುಖ್ಯ’ ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.