ಮಾಸ್ಕೋ: ಟೂರ್ನಿಯುದ್ಧಕ್ಕೂ ಜರ್ಮನಿಯಂತಹ ಘಟಾನುಘಟಿ ತಂಡಗಳಿಗೆ ಮಣ್ಣು ಮುಕ್ಕಿಸಿ ದೈತ್ಯ ಸಂಹಾರಿ ಎನಿಸಿಕೊಂಡಿದ್ದ ಕ್ರೊವೇಷಿಯಾ ಫಿಫಾ ವಿಶ್ವಕಪ್ ಫೈನಲ್ ನಲ್ಲಿ ಸೋಲಲು ಕಾರಣವೇನು ಗೊತ್ತಾ?
ನಿನ್ನೆ ಮಾಸ್ಕೋದಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ಎದುರು ಕ್ರೊವೇಷಿಯಾ 4-2 ಅಂತರದಿಂದ ಸೋತಿದೆ. ಇದರೊಂದಿಗೆ ಫ್ರಾನ್ಸ್ ನೂತನ ಫುಟ್ಬಾಲ್ ವಿಶ್ವ ಚಾಂಪಿಯನ್ ಆಗಿದೆ.
ಆದರೆ ಟೂರ್ನಿಯುದ್ಧಕ್ಕೂ ಅಚ್ಚರಿಯ ಫಲಿತಾಂಶ ನೀಡಿದ್ದ ಕ್ರೊವೇಷಿಯಾ ಮೇಲೆ ಅಪಾರ ನಿರೀಕ್ಷೆಯಿತ್ತು. ಬಹುಶಃ ಈ ನಿರೀಕ್ಷೆಗಳೇ ಆ ತಂಡ ಒತ್ತಡಕ್ಕೊಳಗಾಗುವಂತೆ ಮಾಡಿತು. ಫೈನಲ್ ನಲ್ಲಿ ಎದುರಾಳಿ ಫ್ರಾನ್ಸ್ ಗೆ ಒತ್ತಡದಲ್ಲಿ ಒಂದು ಗೋಲನ್ನೂ ಬಿಟ್ಟುಕೊಟ್ಟಿತು. ಪಂದ್ಯದುದ್ದಕ್ಕೂ ಕ್ರೊವೇಷಿಯಾ ಆಟಗಾರರ ಮುಖದಲ್ಲಿ ಟೆನ್ ಷನ್ ಎದ್ದು ಕಾಣುತ್ತಿತ್ತು. ಆದರೆ ಫ್ರಾನ್ಸ್ ಕೂಲ್ ಆಗಿಯೇ ಫೈನಲ್ ಎದುರಿಸಿತು. ಬಹುಶಃ ಇದೇ ಕಾರಣಕ್ಕೆ ಕ್ರೊವೇಷಿಯಾ ಚೊಚ್ಚಲ ವಿಶ್ವಕಪ್ ಗೆಲ್ಲುವ ಆಸೆ ಕೈ ಜಾರಿಸಿಕೊಂಡಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.