ಕ್ರಿಕೆಟ್ ಪಂದ್ಯಗಳು ಮಳೆಯಿಂದ ಅರ್ಧಕ್ಕೆಣಿತ ನಿಯಮ ನಿಂತರೆ ಅದಕ್ಕೊಂದು ಆ ಪಂದ್ಯವನ್ನ ಮತ್ತೆ ಆಡಲು ಮತ್ತೊಂದು ದಿನ ನಿಗದಿ ಮಾಡುವುದಿಲ್ಲ. ಬದಲಾಗಿ ಡಕ್ವರ್ತ್ ಲೆವಿಸ್ ಎಂಬ ಕ್ಲಿಷ್ಟ ನಿಯಮದ ಆಧಾರದ ಮೇಲೆ ಪಂದ್ಯದ ಫಲಿತಾಂಶ ಘೋಷಿಸಲಾಗುತ್ತೆ. ಈ ನಿಯಮದ ಬಗ್ಗೆ ಹಲವರು ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಿದೆ.
ಗೆಲುವ ಸಾಮರ್ಥ್ಯವಿದ್ದ ತಂಡ ಮಳೆಯಿಂದ ಪಂದ್ಯ ನಿಂತು ಡಕ್ವರ್ತ್ ಲೆವಿಸ್ ಅನ್ವಯ ಸೋತು ಟೂರ್ನಿಯಿಂದ ಹೊರಬಿದ್ದಿರುವ ಉದಾಹರಣೆಗಳಿವೆ. ಸದ್ಯ, ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯಲ್ಲೂ ಹಲವು ಪಂದ್ಯಗಳಿಗೆ ಅನ್ವಯಿಸಲಾಗಿದೆ. ಇಂತಹ ವಿವಾದಾತ್ಮಕ ನಿಯಮದ ಬಗ್ಗೆ ಇತ್ತೀಚೆಗೆ ವಿರಾಟ್ ಕೊಹ್ಲಿ ಚಾರಿಟಿ ಡಿನ್ನರ್`ನಲ್ಲಿ ಭಾಗವಹಿಸಿದ್ದ ಧೋನಿ ಮುಂದೆ ಪತ್ರಕರ್ತರು ಕ್ಲಿಷ್ಟ ಪ್ರಶ್ನೆ ಇಟ್ಟರು.
ನೀವು ಹಲವು ವರ್ಷಗಳಿಂದ ಕ್ರಿಕೆಟ್ ಆಡುತ್ತೀದ್ದೀರಿ. ನಿಮಗೆ ಡಕ್ವರ್ತ್ ಲೆವಿಸ್ ನಿಯಮ ಅರ್ಥವಾಗಿದೆಯಾ..? ಎಂದು ಪತ್ರಕರ್ತರು ಪ್ರಶ್ನೆ ಹಾಕಿದರು. ಇದಕ್ಕುತ್ತರಿಸಿದ ಧೋನಿ, ನಿಜಕ್ಕೂ ಈ ನಿಯಮ್ ಐಸಿಸಿಗೂ ಅರ್ಥವಾದಂತೆ ನನಗನ್ನಿಸುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಇದೇವೇಳೆ, ನಿಮಗೆ ಕಠಿಣ ೆನ್ನಿಸಿದ ವೇಗದ ಬೌಲರ್ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಧೋನಿ, ಎಲ್ಲ ಬೌಲರ್`ಗಳ ಬೌಲಿಂಗ್ ಎದುರಿಸುವುದು ಕಷ್ಟವೇ. ಅದರಲ್ಲಿ ಒಬ್ಬರನ್ನ ಹೇಳಬೇಕೆಂದರೆ ಶೋಯಿಬ್ ಅಖ್ತರ್. ವೇಗವಾಗಿ ಬೌಲ್ ಮಾಡಬಲ್ಲರು, ಬೌನ್ಸರ್ ಎಸೆಯಬಲ್ಲರು. ಅವರ ಬೌಲಿಂಗ್ ಊಹಿಸುವುದ ಕಷ್ಟ. ಬ್ಯಾಟ್ಸ್`ಮನ್`ಗೆ ಅದೊಂದು ರೀತಿ ಫನ್ ಎಂದಿದ್ದಾರೆ.