ಮುಂಬೈ: ಈ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಉತ್ತಮ ಮೊತ್ತ ದಾಖಲಿಸುತ್ತಿದೆ ಎಂದರೆ ಅದಕ್ಕೆ ನಾಯಕ ರೋಹಿತ್ ಶರ್ಮಾ ನೀಡುತ್ತಿರುವ ಸ್ಪೋಟಕ ಆರಂಭವೂ ಮುಖ್ಯ ಕಾರಣ.
ಮೊದಲ ಐದು ಓವರ್ ನಲ್ಲಿಯೇ ಭರ್ಜರಿ ಹೊಡೆತಗಳ ಮೂಲಕ ಎದುರಾಳಿ ಬೌಲಿಂಗ್ ಧೂಳೀಪಟ ಮಾಡುವ ರೋಹಿತ್ ಶರ್ಮಾ ಇಂದಿನ ಪಂದ್ಯದಲ್ಲಿ ವಿಶ್ವ ದಾಖಲೆಯೊಂದನ್ನು ಮಾಡಿದ್ದಾರೆ.
ರೋಹಿತ್ ಇಂದು ಈ ವಿಶ್ವಕಪ್ ಕೂಟದ 50 ನೇ ಸಿಕ್ಸರ್ ಸಿಡಿಸಿದರು. ಆ ಮೂಲಕ ಒಂದೇ ವಿಶ್ವಕಪ್ ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಕ್ರಿಸ್ ಗೇಲ್(49) ಅವರ ವಿಶ್ವದಾಖಲೆಯನ್ನು ಮುರಿದರು. ಅಷ್ಟೇ ಅಲ್ಲದೆ ವಿಶ್ವಕಪ್ ಗಳಲ್ಲಿ ವೇಗವಾಗಿ 1500 ರನ್ ಗಳಿಸಿದ ದಾಖಲೆಯನ್ನೂ ಮಾಡಿದ್ದಾರೆ.