ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಸಿಡ್ನಿ ಟೆಸ್ಟ್ ಪಂದ್ಯದ ವೇಳೆ ಭಾರತೀಯ ಕ್ರಿಕೆಟಿಗರ ಮೇಲೆ ಜನಾಂಗೀಯ ನಿಂದನೆ ಮಾಡಿದ ಪ್ರೇಕ್ಷಕರಿಗೆ ಯಾವುದೇ ಶಿಕ್ಷೆಯಿಲ್ಲದೇ ಬಿಟ್ಟು ಬಿಡಲು ಕ್ರಿಕೆಟ್ ಆಸ್ಟ್ರೇಲಿಯಾ ತೀರ್ಮಾನಿಸಿದೆಯೇ? ಇಂತಹದ್ದೊಂದು ಅನುಮಾನ ಮೂಡಿದೆ.
ಆಂಗ್ಲ ಮಾಧ್ಯಮವೊಂದರ ಪ್ರಕಾರ ಸಿಎ ಐಸಿಸಿಗೆ ನೀಡಿರುವ ವರದಿಯಲ್ಲಿ ಜನಾಂಗೀಯ ನಿಂದನೆ ಮಾಡಿದ್ದು ನಿಜ ಎಂದು ಒಪ್ಪಿಕೊಂಡಿದೆ. ಆದರೆ ತಪ್ಪಿತಸ್ಥರು ಯಾರು ಎಂದು ಪತ್ತೆ ಮಾಡಲು ಸಾಧ್ಯವಾಗಿಲ್ಲ ಎಂದು ವರದಿ ನೀಡಿದೆ ಎನ್ನಲಾಗಿದೆ. ಈ ಮೂಲಕ ತಪ್ಪಿತಸ್ಥರನ್ನು ಬಿಟ್ಟುಬಿಡಲು ತಯಾರಿ ನಡೆದಿದೆಯೇ ಎಂಬ ಅನುಮಾನ ಮೂಡಿದೆ. ಆದರೆ ಈ ಬಗ್ಗೆ ಇನ್ನೂ ಕ್ರಿಕೆಟ್ ಆಸ್ಟ್ರೇಲಿಯಾ ಯಾವುದೇ ಹೇಳಿಕೆ ನೀಡಿಲ್ಲ.