ಪುಣೆ: ಚೇತೇಶ‍್ವರ ಪೂಜಾರ ಎಂದರೆ ಪಕ್ಕಾ ಟೆಸ್ಟ್ ಕ್ರಿಕೆಟ್ ಗೆ ಹೇಳಿ ಮಾಡಿಸಿದ ಕ್ರಿಕೆಟಿಗ. ಅವರು ಬಿರುಸಿನ ಆಟವಾಡುವುದೇ ಕಡಿಮೆ. ರಕ್ಷಣಾತ್ಮಕ ಆಟದ ಮೂಲಕ ತಂಡಕ್ಕೆ ಆಧಾರ ಸ್ತಂಬವಾಗಿರುತ್ತಾರೆ.
ಆದರೆ ದ.ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳಿಂದ ಅವರ ಆಟದ ಶೈಲಿಯಲ್ಲೂ ಕೊಂಚ ಮಟ್ಟಿಗಿನ ಬದಲಾವಣೆ ಕಾಣುತ್ತಿದೆ. ಕಳೆದ ಪಂದ್ಯದಲ್ಲಿ 81 ರನ್ ಗಳ ಇನಿಂಗ್ಸ್ ನಲ್ಲಿ 2 ಸಿಕ್ಸರ್ ಸಿಡಿಸಿದ್ದ ಪೂಜಾರ ಇದೀಗ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ಒಂದು ಸಿಕ್ಸರ್ ಸಿಡಿಸಿದ್ದಾರೆ.
ಆ ಮೂಲಕ ಸತತ ಎರಡು ಪಂದ್ಯಗಳಲ್ಲಿ ಸಿಕ್ಸರ್ ಸಿಡಿಸ ವೈಯಕ್ತಿಕವಾಗಿ ಹೊಸ ದಾಖಲೆ ಮಾಡಿದ್ದಾರೆ. ಇದು ಬೇರೆ ಕ್ರಿಕೆಟಿಗರಿಗೆ ಹೋಲಿಸಿದರೆ ದಾಖಲೆಯೇ ಅಲ್ಲ .ಹಾಗಿದ್ದರೂ ಪೂಜಾರಾ ಕೂಡಾ ತಮ್ಮ ಬ್ಯಾಟಿಂಗ್ ನಲ್ಲಿ ಬದಲಾವಣೆ ತಂದಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ.